ವೃತ್ತಿಪರ -ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
ಉಡುಪಿ, ನ.13: ಜಿಲ್ಲಾ ಶ್ರೀವಿಶ್ವಕರ್ಮ ಎಜುಕೇಷನಲ್ ಟ್ರಸ್ಟ್ ವತಿಯಿಂದ ವೃತ್ತಿಪರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ‘ಸಂದರ್ಶನ ಎದುರಿಸುವುದು ಹೇಗೆ?’ ಎಂಬ ಕುರಿತ ಕಾರ್ಯಾಗಾರವನ್ನು ಇತ್ತೀಚೆಗೆ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಖ್ಯಾತಿ ಇಂಟೀರಿಯರ್ ಡೆಕೋರೇಟರ್ ಮೋಹನ್ ಬಿ.ಆಚಾರ್ಯ ಉದ್ಘಾಟಿಸಿದರು. ಮೂಡಬಿದ್ರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲ ಪ್ರೊ.ವಸಂತ್ ಕುಮಾರ್ ನಿಟ್ಟೆ ಕಾರ್ಯಾಗಾರ ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ವಹಿಸಿದ್ದರು.
ಹೊಳೆನರಸೀಪುರ ಸರಕಾರಿ ಆಯುರ್ವೇದಿಕ್ ಆಸ್ಪತ್ರೆಯ ಆಯುಷ್ ವೈದ್ಯಕೀಯ ಅಧಿಕಾರಿ ಡಾ.ಜಯಂತ್ ಮಾನಸಿಕ ಹಾಗೂ ದೈಹಿಕ ಆರೋಗ್ಯ ವನ್ನು ಕಾಪಿಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ವಸಂತ್ ಆಚಾರ್ಯ ಕಾರ್ಕಳ ಸ್ವಾಗತಿಸಿದರು. ಬಿ.ಎ.ಆಚಾರ್ಯ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಭಾಸ್ಕರ ಆಚಾರ್ಯ ವಂದಿಸಿದರು. ಉಷಾ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸುಮಾರು 80 ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಸಮಾರೋಪ: ಮುಖ್ಯ ಅತಿಥಿಗಳಾಗಿ ಉಜಿರೆ ಎಸ್‌ಡಿಎಂ ಇಂಜಿನಿಯ ರಿಂಗ್ ಕಾಲೇಜಿನ ಡಾ.ಕೆ.ಮಂಜುನಾಥ್ ಸೌರಶಕ್ತಿ ವಿಭಾಗದಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ಡಾ.ಬಿ.ಎನ್.ಶಾಂತಪ್ರಿಯ ಕೌಶಲ್ಯಾಭಿವೃದ್ಧಿ ತರಬೇತಿಗಳಲ್ಲಿನ ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಸುಶ್ಮಾ ಪಿ.ಎಸ್ ಸಮಾ ರೋಪ ಭಾಷಣ ಮಾಡಿದರು. ಬಿ.ಎ.ಆಚಾರ್ಯ ಸ್ವಾಗತಿಸಿದರು. ಪ್ರೊ. ಭಾಸ್ಕರ ಆಚಾರ್ಯ ವಂದಿಸಿದರು. ವಸಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.