ಮುಹ್ಯಿಸ್ಸುನ್ನ ಕರ್ನಾಟಕ "ಅಲ್ ಮುಸಾಬಖತುಲ್ ಅದಬಿಯ್ಯ-17" ಕಾರ್ಯಕ್ರಮ
ಮಂಗಳೂರು, ನ. 13: ಮುಹ್ಯಿಸ್ಸುನ್ನ ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ ಉಸ್ತಾದರ ಕರ್ನಾಟಕದ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಮುಹ್ಯಿಸ್ಸುನ್ನ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ವತಿಯಿಂದ ದರ್ಸ್ ವಿದ್ಯಾರ್ಥಿಗಳಿಗಾಗಿ "ಅಲ್-ಮುಸಾಬಖತುಲ್ ಅದಬಿಯ್ಯ-17" ಮುತಅಲ್ಲಿಂ ಪ್ರತಿಭಾ ಸಮ್ಮಿಲನವು ಮಜ್ಲಿಸ್ ಕ್ಯಾಂಪಸ್ ಗಾಣೆಮಾರಿನಲ್ಲಿ ನಡೆಯಿತು.
ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶೈಖುನಾ ಬೇಕಲ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಯ್ಯಿದ್ ನಿಝಾಮುದ್ದೀನ್ ಬಾಫಖೀ ತಂಙಳ್ ದುಆ ನೆರವೇರಿಸಿದರು. ಮುಹ್ಯಿಸ್ಸುನ್ನ ಅಧ್ಯಕ್ಷರಾದ ಅಶ್ರಫ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು.
ಮಧ್ಯಾಹ್ನದ ಬಳಿಕ ನಡೆದ ಮುಹ್ಯಿಸ್ಸುನ್ನ ಸಂಗಮ ಹಾಗೂ ತರ್ಬಿಯತ್ ಕ್ಯಾಂಪ್ ಗೆ ಮಂಜೇರಿ ಜಾಮಿಅ ಹಿಕಮಿಯ್ಯ ಮುದರ್ರಿಸರೂ, ಮುಹ್ಯಿಸ್ಸುನ್ನ ಕೇಂದ್ರ ಸಮಿತಿ ಪ್ರ. ಕಾರ್ಯದರ್ಶಿ ಶೈಖುನಾ ಹಸನ್ ಬಾಖವಿ ಪಲ್ಲಾರ್ ನೇತೃತ್ವ ನೀಡಿ ಹಿತೋಪದೇಶಗಳನ್ನು ನೀಡಿದರು.
ಎರಡು ದಿನಗಳಲ್ಲಾಗಿ ನಡೆದ ಮೂವತ್ತೊಂದು ಸ್ಪರ್ಧೆಗಳಲ್ಲಿ ಮುಹ್ಯಿಸ್ಸುನ್ನ ಸಿಲೆಬಸ್ ಪ್ರಕಾರ ಕಾರ್ಯಾಚರಿಸುತ್ತಿರುವ ಕರ್ನಾಟಕದ ಹನ್ನೊಂದು ದರ್ಸ್ ಗಳ ಸುಮಾರು ಮುನ್ನೂರಕ್ಕಿಂತಲೂ ಅಧಿಕ ಪ್ರತಿಭೆಗಳು ಪಾಲ್ಗೊಂಡಿದ್ದರು.
ಮುಹ್ಯಿಸ್ಸುನ್ನ ದರ್ಸ್ ಉಕ್ಕುಡ, ಮಜ್ಲಿಸ್ ಗಾಣೆಮಾರ್ ಹಾಗೂ ದ್ಸಿಕ್ರಾ ಮೂಡಬಿದ್ರೆ ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತ್ರತೀಯ ಸ್ಥಾನಗಳನ್ನು ಗಿಟ್ಟಿಸಿಕೊಂಡರು. ಸೀನಿಯರ್ ವಿಭಾಗದಲ್ಲಿ ಹಾಫಿಳ್ ಹಾಶಿರ್ ಗಾಣೆಮಾರ್ ಹಾಗೂ ಜೂನಿಯರ್ ವಿಭಾಗದಲ್ಲಿ ದಾವೂದ್ ಉಕ್ಕುಡ ಕಲಾಪ್ರತಿಭೆಗಳಾಗಿ ಆಯ್ಕೆಗೊಂಡರು.
ಎಸ್.ಎಸ್.ಎಫ್ ದ.ಕ ಜಿಲ್ಲಾಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ,ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ಎಸ್.ವೈ.ಎಸ್ ದ.ಕ ಜಿಲ್ಲಾ ಉಪಾಧ್ಯಕ್ಷ ಸಿದ್ದೀಖ್ ಸಖಾಫಿ ಕೌಡೇಲು,ಮಜ್ಲಿಸ್ ಗಾಣೆಮಾರ್ ಚೆಯರ್ಮೇನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಅಲ್ ಕಾಮಿಲಿ, ನೌಫಲ್ ಸಖಾಫಿ ಕಳಸ ದ್ಸಿಕ್ರಾ ಮೂಡಬಿದ್ರೆ, ಇಸ್ಮಾಯಿಲ್ ಸಅದಿ ಮಾಚಾರ್, ಪಂಪ್ ವೆಲ್ ಮಸ್ಜಿದುತ್ತಖ್ವಾ ಖತೀಬ್ ಹಾಫಿಳ್ ಅಬ್ದುರ್ರಹ್ಮಾನ್ ಸಖಾಫಿ ಚಿಯ್ಯೂರು, ಬಾವುಟಗುಡ್ಡೆ ಮಸೀದಿಯ ಖತೀಬ್ ಸ್ವದಖತುಲ್ಲಾ ನದ್ವಿ ಮಾಣಿ, ಬದ್ರುದ್ದೀನ್ ಅಝ್ಹರಿ ಕೈಕಂಬ, ಹಾಫಿಳ್ ಅಹ್ಮದ್ ಶರೀಫ್ ಸಖಾಫಿ ಉಕ್ಕುಡ, ಫಾರೂಖ್ ಸಖಾಫಿ ಕಾಟಿಪಳ್ಳ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಹ್ಯಿಸ್ಸುನ್ನ ಪ್ರ.ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪಾತೂರು ಸ್ವಾಗತಿಸಿ, ಮುಸಾಬಖ ಸಮಿತಿ ಕನ್ವೀನರ್ ಸಿದ್ದೀಖ್ ಸಖಾಫಿ ಕಾಯಾರ್ ವಂದಿಸಿದರು.