ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ
Update: 2017-11-13 23:03 IST
ಮಂಗಳೂರು, ನ. 13: ನಗರದ ಹರೇಕಳ ಕಡವಿನ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಕೋಣಾಜೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮುಹಮ್ಮದ್ ಅಶ್ರಫ್ ಯಾನೆ ಪೊಂಗ ಅಶ್ರಫ್ ಯಾನೆ ಡೈಮಂಡ್ ಅಶ್ರಫ್ ಮತ್ತು ಮ್ಯಾಹಿಯುದ್ದೀನ್ ಯಾನೆ ನೌಷಾದ್ ಎಂದು ಗುರುತಿಸಲಾಗಿದೆ.
ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕೋಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೋಣಾಜೆ ಪೊಲೀಸ್ ನಿರೀಕ್ಷಕ ಅಶೋಕ್, ಪಿಎಸ್ಸೈ ರವಿ ಪಿ. ಪವಾರ್, ಎಎಸ್ಸೈ ಸಂಜೀವ ಮತ್ತು ಸಿಬ್ಬಂದಿ ಅಶೋಕ್, ದೇವರಾಜ್ ಪಾಲ್ಗೊಂಡಿದ್ದರು.