ಮೊಬೈಲ್ ಕೊಡುತ್ತೇವೆ ಎಂದು ಹೇಳಿ ಮೂರ್ತಿ ಚಿತ್ರ ಕಳುಹಿಸಿದರು !

Update: 2017-11-13 17:38 GMT

ಕೊಣಾಜೆ, ನ. 13: ಮೊಬೈಲ್ ಮತ್ತು ಉಚಿತ ಸಿಮ್ ಇದೆಯೆಂದು ಮಹಿಳೆಯೊಬ್ಬರಿಗೆ ನಿರಂತರ ಕರೆ ಮಾಡಿ  ಮೂರ್ತಿಯ ಫೋಟೊ ಕಳುಹಿಸಿ ಮೋಸಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಪಾವೂರು ಗ್ರಾಮದ ಇನೋಳಿ ಮಜಿಕಟ್ಟ ನಿವಾಸಿ ಜಯಂತಿ ಲೀಲಾಧರ ಎಂಬವರೇ ಮೋಸಕ್ಕೊಳಗಾದವರು ಎಂದು ಗುರುತಿಸಲಾಗಿದೆ.

ಇವರಿಗೆ ಮಹಿಳೆಯರಿಬ್ಬರು 9606460362 ಹಾಗೂ 9606460374 ಸಂಖ್ಯೆಯಿಂದ ನಿರಂತರ ಕರೆ ಮಾಡಿ ಟಚ್ ಸ್ಕ್ರೀನ್ ಮೊಬೈಲ್ ಹಾಗೂ ಉಚಿತ ಬಿಎಸ್‌ಎನ್‌ಎಲ್ ಸಿಮ್ ಆಫರ್ ಇದೆ, 1,850 ರೂಪಾಯಿ ಅಂಚೆ ಕಚೇರಿಯಲ್ಲಿ ಜಮಾಯಿಸುವಂತೆ ಒತ್ತಾಯಿಸಿದ್ದಾರೆ. ನಿರಂತರ ಕರೆಯನ್ನು ನಂಬಿದ ಜಯಂತಿ ಅವರು ಅಂಚೆ ಕಚೇರಿಯಲ್ಲಿ ಹಣ ಜಮಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ಎಕ್ಸ್‌ಪ್ರೆಸ್ ಪಾರ್ಸೆಲ್ ಕೋಡ್ ಲಕೋಟೆಯಲ್ಲಿ ಕಟ್ಟೊಂದು ಬಂದಿದೆ. ಅದರೊಳಗೆ ಚಿನ್ನ ಲೇಪಿತ ಕೆಲವು ಮೂರ್ತಿಯ ಪ್ಲೇಟ್‌ಲೆಟ್‌ಗಳು ಬಂದಿವೆ. ಈ ಬಗ್ಗೆ ವಿಚಾರಿಸಲೆಂದು ಕರೆ ಮಾಡಿದಾಗ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ಲೀಲಾಧರ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News