​ನ.19: ರೋಟರಿ ಅನಾಥಾಶ್ರಮ ಮಕ್ಕಳ ಒಲಂಪಿಕ್ಸ್ ಕ್ರೀಡಾಕೂಟ

Update: 2017-11-14 11:45 GMT

ಮಂಗಳೂರು, ನ.14 : ರೋಟರಿ ಮಂಗಳೂರು ಸೆಂಟ್ರಲ್ ಹಾಗೂ ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಯುಕ್ತ ಆಶ್ರಯದಲ್ಲಿ ಸಮಾಜಸೇವಾ ಚಟುವಟಿಕೆಗಳ ಅಂಗವಾಗಿ 19 ನೇ ವರ್ಷದ ರೋಟರಿ ಅನಾಥಾಶ್ರಮ ಮಕ್ಕಳ ಒಲಂಪಿಕ್ಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ನ.19 ರಂದು ನಗರದ ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜರಗಲಿರುವುದು.

ನ.19 ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಮಂಗಳೂರು ಪೊಲೀಸ್ ಆಯು ಟಿ.ಆರ್. ಸುರೇಶ್ ಅವರು ಉದ್ಘಾಟಿಸುವರು. ರೋಟರಿ ಸಹಾಯಕ ಗವರ್ನರ್ ನವೀನ್ ಕುಮಾರ್ ಅತಿಥಿಯಾಗಿ ಭಾಗವಹಿಸುವರು. ಜಿಲ್ಲೆಯ 11 ಅನಾಥಾಶ್ರಮಗಳ ಸುಮಾರು 600 ವಿದ್ಯಾರ್ಥಿಳು ಇದರಲ್ಲಿ ಪಾಲ್ಗೊಳ್ಳುವರು. ಸಮಾರೋಪ ಸಂಜೆ 4 ಗಂಟೆಗೆ ಜರಗಲಿದ್ದು ರೋಟರಿ ಜಿಲ್ಲೆ 3181ರ 2018-19 ಸಾಲಿನ ಗವರ್ನರ್ ರೋಹಿನಾಥ್ ಪಿ. ಅತಿಥಿಯಾಗಿ ಆಗಮಿಸಿ ಬಹುಮಾನ ವಿತರಿಸುವರು. ರೋಟರಿ ಕ್ಲಬ್‌ನ ಅಧ್ಯಕ್ಷ ರೇಮಂಡ್ ಡಿಕುನ್ನಾ ಅಧ್ಯಕ್ಷತೆ ವಹಿಸುವರು ಎಂದು ರೋಟರಿ ಅನಾಥಾಶ್ರಮ ಮಕ್ಕಳ ಒಲಂಪಿಕ್ಸ್ ಕ್ರೀಡಾ ಮತುತಿ ಸಾಂಸ್ಕೃತಿಕ ಸ್ಪರ್ಧಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಬಿ. ದೇವದಾಸ ರೈ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

ಅನಾಥಾಶ್ರಮದ ಮಕ್ಕಳು ಸಂತಸ, ಸಂಭ್ರಮದಿಂದ ಭಾಗವಹಿಸಿ ತಮ್ಮ ಪ್ರತಿಭೆ, ಕೌಶಲ್ಯಗಳ ಪ್ರದರ್ಶಿಸಲಿದ್ದಾರೆ. ಸ್ಪರ್ಧಾವಿಜೇತರಿಗೆ ಬಹುಮಾನ ಹಾಗೂ ಸರ್ವಾಂಗೀಣ ಪ್ರದರ್ಶನ ನೀಡಿದ ಅನಾಥಾಶ್ರಮಕ್ಕೆ ಪ್ರಶಸ್ತಿ ಲಕ ನೀಡಲಾಗುವುದು ಎಂದವರು ವಿವರಿಸಿದರು.

ರೋಟರಿ ಮಂಗಳೂರು ಸೆಂಟ್ರಲ್ ಕಾರ್ಯದರ್ಶಿ ಪ್ರಕಾಶ್ಚಂದ್ರ , ರೋಟರ್ಯಾಕ್ಟ್ ಮಂಗಳೂರು ಸಿಟಿಯ ಶರತ್ ಹಾಗೂ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News