×
Ad

ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

Update: 2017-11-14 17:33 IST

ಮಂಗಳೂರು, ನ.14: ಮಕ್ಕಳ ದಿನಾಚರಣೆಯ ಅಂಗವಾಗಿ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮಕ್ಕಳ ಸಾಂಸ್ಕೃತಿಕ ಉತ್ಸವ ‘ರಿಗೇಲ್-2017’ ಕಾರ್ಯಕ್ರಮ ಶಾಲೆಯ ಮೈದಾನದಲ್ಲಿಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ನಾಯಕ ಅಬ್ನಾರ್ ಪಿಂಟೊ ಮಾತನಾಡಿ, ಶಾಲೆ ನಮ್ಮ ಪ್ರಪಂಚ. ಇಲ್ಲಿ ಜ್ಞಾನಾರ್ಜನೆ ಮಾತ್ರವಲ್ಲದೆ ಶಿಕ್ಷಕರ ಎಲ್ಲ ವಿಧದ ಸಹಕಾರ, ಮಾರ್ಗದರ್ಶನ ನಮ್ಮನ್ನು ಉತ್ತಮ ಪ್ರಜೆಗಳಾಗಿ ರೂಪಿಸುತ್ತವೆ. ನಮ್ಮಲ್ಲಿನ ಕಲೆ, ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಶಾಲೆ ನಮಗೆ ನೀಡುತ್ತದೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಲಾ ಸಂಚಾಲಕ ರೆ.ಫಾ.ವಿಲ್ಸನ್ ವೈಟಸ್ ಡಿಸೋಜ, ವಿದ್ಯಾರ್ಥಿಗಳು ಶಾಲೆಯಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಶಾಲಾ ಪ್ರಾಂಶುಪಾಲ ರೆ.ಫಾ.ರಾಬರ್ಟ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕ-ರಕ್ಷಕ ಸಂದ ಉಪಾಧ್ಯಕ್ಷ ಡಾ.ವಾಸುದೇವ ಪೈ, ಸಹ ಕಾರ್ಯದರ್ಶಿ ರಮೋನ ಮಥಾಯಸ್, ಶಾಲಾಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಉಪನಾಯಕಿ ಮೇಘನಾ ಕಶ್ಯಪ್ ವಂದಿಸಿದರು. ಶಿಕ್ಷಕಿ ದೀಪಾ ಡಿಸೋಜ, ಪಮೇಲಾ ಮಿರಾಂದ, ರೇಷ್ಮಾ ಕಾರ್ಯಕ್ರಮ ನಿರ್ವಹಿಸಿದರು.
ಹೋಟೆಲ್ ಗೋಲ್ಡ್ ಫಿಂಚ್‌ರವರ ಆಹಾರ ಮಳಿಗೆ ಹಾಗೂ ಶಾಲಾ ಶಿಕ್ಷಕರಿಂದ ನಿರ್ವಹಿಸಲ್ಪಟ್ಟ ಮನೋರಂಜನಾ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News