ಪುತ್ತೂರು: ಶಿಕ್ಷಕಿ ಸುನೀತಾ ಅವರಿಗೆ ಪಾಚ್‌ಮೇಟ್ ಪದವಿ
Update: 2017-11-15 18:23 IST
ಪುತ್ತೂರು, ನ. 15: ಇಲ್ಲಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಗೈಡ್ ಶಿಕ್ಷಕಿ ಸುನೀತಾ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್‌ನ ಪರೀಕ್ಷೆಗಳಲ್ಲಿ ಅಂತಿಮ ಪರೀಕ್ಷೆಯಾಗಿರುವ ಲೀಡರ್ ಟ್ರೈನರ್ (ಎಲ್.ಟಿ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಪರೀಕ್ಷೆಗೆ ಪುತ್ತೂರಿನಿಂದ ಹಾಜರಾದ ಪ್ರಪ್ರಥಮ ಗೈಡ್ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುನೀತಾ ಅವರು ರಾಷ್ಟ್ರ ತರಬೇತಿ ಕೇಂದ್ರವಾದ ಮಧ್ಯಪ್ರದೇಶದ ಪಚ್‌ಮಡಿಯಲ್ಲಿ ತರಬೇತಿಯನ್ನು ಪಡೆದು ಪಾಚ್‌ಮೇಟ್ ಪದವಿಯನ್ನು ಪಡೆದಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ರೂಪಕಲಾ ಕೆ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.