ರಾಷ್ಟ್ರೀಯ ಮುಕ್ತ ಕರಾಟೆಯಲ್ಲಿ ಚಿನ್ನದ ಪದಕ
Update: 2017-11-15 19:15 IST
ಪುತ್ತೂರು, ನ. 15: ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ ಕಟಾ ವಿಭಾಗ ಮತ್ತು ಕುಮಿಟೆ ವಿಭಾಗದಲ್ಲಿ ರಾಮಕೃಷ್ಣ ಪ್ರೌಢಶಾಲೆಯ 8ನೆ ತರಗತಿ ವಿದ್ಯಾರ್ಥಿ ಶಶಾಂಕ್ ಪಿ.ಎಚ್. ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರಾಟೆ ಶಿಕ್ಷಕ ಸನ್‌ಸೈ ಟಿ.ಡಿ.ಥಾಮಸ್ ಅವರಲ್ಲಿ ತರಬೇತಿ ಪಡೆದ ಶಶಾಂಕ್ ಬನ್ನೂರಿನ ಹರೀಶ್ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ.