ನ.16: ಹಜ್ ಫಾರಂ ವಿತರಣೆಗೆ ಚಾಲನೆ
Update: 2017-11-15 21:22 IST
ಮಂಗಳೂರು, ನ.15: 2018ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಹಜ್ ಫಾರ್ಮ್‌ನ್ನು ಪಾಂಡೇಶ್ವರ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಮೌಲಾನಾ ಆಝಾದ್ ಭವನದ ಸಭಾಂಗಣದಲ್ಲಿ ನ.16ರಂದು ಬೆಳಗ್ಗೆ 11ಕ್ಕೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಗುವುದು ಹಾಗೂ ಅರ್ಜಿ ಸಲ್ಲಿಸಲು ಅಪೇಕ್ಷಿಸುವ ಯಾತ್ರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ಹಜ್ ನಿರ್ವಾಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಎಂ. ರಶೀದ್ ಹಾಜಿ ತಿಳಿಸಿರುತ್ತಾರೆ.