ಡಾಟಾ ಎಂಟ್ರಿ ಆಪರೇಟರ್‌ಗೆ ಅರ್ಜಿ ಆಹ್ವಾನ
Update: 2017-11-15 21:23 IST
ಮಂಗಳೂರು, ನ.15: ರಾಜ್ಯದ ಪ್ರತಿ ಗ್ರಾಪಂಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಟಿಸಲು ಸರಕಾರ ನಿರ್ಧರಿಸಿದ್ದು, ಅದರಂತೆ ಮಂಗಳೂರು ತಾಲೂಕಿನ 55 ಗ್ರಾಪಂಗೆ ತಲಾ ಒಂದರಂತೆ ಡಾಟಾ ಎಂಟ್ರಿ ಆಪರೇಟರುಗಳನ್ನು ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಯಾವ ಗ್ರಾಪಂಗೆ ಅರ್ಜಿ ಸಲ್ಲಿಸಲು ಬಯಸಿರುವರೋ ಆ ಗ್ರಾಪಂ ಪಿಡಿಒಗೆ ನ.30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ರೂ.150ನ್ನು ಡಿ.ಡಿ. ಪೋಸ್ಟಲ್ ಆರ್ಡರ್ ಮೂಲಕ ಪಾವತಿಸಬೇಕು ಎಂದು ಪ್ರಕಟನೆ ತಿಳಿಸಿದೆ.