ಹ್ಯಾಕ್ ಮಾಡಿ ಬ್ಯಾಂಕ್‌ನಿಂದ ಹಣ ಡ್ರಾ
Update: 2017-11-15 22:02 IST
ಮಂಗಳೂರು, ನ.15: ನಗರದ ಪೂಜಾ ಡಿ. ಶೇಟ್ ಎಂಬವರಿಗೆ ಸೇರಿದ ಮೂರು ಬ್ಯಾಂಕ್‌ನ ಮೂರು ಬ್ರಾಂಚ್‌ಗಳಲ್ಲಿ ಡಿಪಾಸಿಟ್ ಆಗಿಡಲಾಗಿದ್ದ ಹಣವನ್ನು ಹ್ಯಾಕ್ ಮಾಡಿ ಹಣ ಡ್ರಾ ಮಾಡಿದ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಬ್ಯಾಂಕ್‌ನಿಂದ 42,223 ರೂ., ಕೆನರಾ ಬ್ಯಾಂಕ್‌ನಿಂದ 7,500 ರೂ., ಎಸ್‌ಬಿಐನಿಂದ 52,500 ರೂ. ಹಣವನ್ನು ಜುಲೈ 1ರಿಂದ ಸೆಪ್ಟಂಬರ್ 18ರ ಮಧ್ಯೆ ಲಪಟಾಯಿಸಲಾಗಿದೆ ಎಂದು ಪೂಜಾ ಡಿ. ಶೇಟ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.