×
Ad

ಜಗತ್ತಿನ 1 ಶೇಕಡ ಶ್ರೀಮಂತರಲ್ಲಿ 3.4 ಲಕ್ಷ ಭಾರತೀಯರು

Update: 2017-11-15 22:23 IST

ಲಂಡನ್, ನ. 15: ಜಾಗತಿಕ 1 ಶೇಕಡ ಶ್ರೀಮಂತರ ಪೈಕಿ 0.7 ಶೇಕಡ, ಅಂದರೆ ಸುಮಾರು 3.4 ಲಕ್ಷ ಭಾರತೀಯರಿದ್ದಾರೆ ಎಂದು ಮಂಗಳವಾರ ಬಿಡುಗಡೆಗೊಂಡ ಜಾಗತಿಕ ಸಂಪತ್ತು ವರದಿಯೊಂದು ಹೇಳಿದೆ.

ಈ ಪೈಕಿ 1,820 ಭಾರತೀಯರ ವೈಯಕ್ತಿಕ ಸಂಪತ್ತು 50 ಮಿಲಿಯ ಡಾಲರ್ (ಸುಮಾರು 326 ಕೋಟಿ ರೂಪಾಯಿ) ಹಾಗೂ 760 ಭಾರತೀಯರ ಸಂಪತ್ತು 100 ಮಿಲಿಯ ಡಾಲರ್ (ಸುಮಾರು 652 ಕೋಟಿ ರೂಪಾಯಿ)ಗಿಂತಲೂ ಅಧಿಕವಾಗಿದೆ ಎಂದು ಸ್ವಿಟ್ಸರ್‌ಲ್ಯಾಂಡ್‌ನ ಝೂರಿಕ್‌ನಲ್ಲಿರುವ ಹಣಕಾಸು ಸೇವಾ ಸಂಸ್ಥೆ ‘ಕ್ರೆಡಿಟ್ ಸ್ವಿಸ್’ನ ವರದಿ ತಿಳಿಸಿದೆ.

ಸಂಪತ್ತು ಗಳಿಕೆ ಪ್ರಮಾಣದಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದೆ. ಅದು 2017ರ ಮಧ್ಯಭಾಗದವರೆಗಿನ 12 ತಿಂಗಳ ಅವಧಿಯಲ್ಲಿ ಒಟ್ಟು ಜಾಗತಿಕ ಸಂಪತ್ತಿಗೆ 8.5 ಟ್ರಿಲಿಯನ್ ಡಾಲರ್ (5.54 ಕೋಟಿ ಕೋಟಿ ರೂಪಾಯಿ) ಸೇರಿಸಿದೆ. ಇದು ಈ ಅವಧಿಯಲ್ಲಿ ಒಟ್ಟು ಸೇರ್ಪಡೆಯಾದ ಜಾಗತಿಕ ಸಂಪತ್ತಿನ ಅರ್ಧದಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News