ಮಹಿಳೆಯ ಬ್ಯಾಗ್‌ನಿಂದ ಚಿನ್ನಾಭರಣ ಕಳವು
Update: 2017-11-15 22:24 IST
ಮಂಗಳೂರು, ನ.15: ನಗರದ ಉರ್ವಸ್ಟೋರ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಮುಲ್ಕಿ ನಿವಾಸಿ ನಳಿನ್ ಎಂಬವರ ವ್ಯಾನಿಟಿ ಬ್ಯಾಗ್‌ನಿಂದ ಪರಿಚಿತನೊಬ್ಬ ಚಿನ್ನಾಭರಣ ಕಳವುಗೈದ ಘಟೆನ ಬೆಳಗ್ಗೆ ನಡೆದಿದೆ.
ನಳಿನಿ ಬಸ್ಸಿಗಾಗಿ ನಿಂತಿದ್ದಾಗ ಪರಿಚಯದ ಸುಶಾಂತ್ ಎಂಬಾತ ಆಗಮಿಸಿ ಮಾತುಕತೆ ನಡೆಸುತ್ತಲೇ ನಳಿನಿಯ ಗಮನಕ್ಕೆ ಬಾರದಂತೆ ವ್ಯಾನಿಟಿ ಬ್ಯಾಗ್‌ನ ಜಿಪ್ ಎಳೆದು ಪರ್ಸ್ ಕಳವುಗೈದಿದ್ದಾನೆ. ಈ ಪರ್ಸ್‌ನಲ್ಲಿ ಸುಮಾರು 56 ಗ್ರಾಂ ತೂಕದ 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈಯಲಾಗಿದೆ. ಅಲ್ಲದೆ ಆಧಾರ್ ಕಾರ್ಡಿನ ಜೆರಾಕ್ಸ್ ಪ್ರತಿಯನ್ನೂ ಕೂಡ ಆರೋಪಿ ಕಳವುಗೈದಿದ್ದಾನೆ ಎಂದು ನಳಿನಿ ಉರ್ವ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.