×
Ad

ಟ್ರಂಪ್‌ಗೆ ನಡು ಬೆರಳು ತೋರಿಸಿದ ಮಹಿಳೆಗೆ 70,000 ಡಾ. ನಿಧಿ ಸಂಗ್ರಹ

Update: 2017-11-15 22:50 IST

ವಾಶಿಂಗ್ಟನ್, ನ. 15: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಾಹನಗಳ ಸಾಲಿನತ್ತ ಮಧ್ಯ ಬೆರಳನ್ನು ತೋರಿಸಿರುವುದಕ್ಕಾಗಿ ಕೆಲಸದಿಂದ ವಜಾಗೊಂಡಿರುವ ಮಹಿಳೆಯ ಸಹಾಯಾರ್ಥವಾಗಿ 70,000 ಡಾಲರ್ (ಸುಮಾರು 45.66 ಲಕ್ಷ ರೂಪಾಯಿ)ಗೂ ಅಧಿಕ ನಿಧಿ ಹರಿದುಬಂದಿದೆ.

ನವೆಂಬರ್ 6ರಂದು ಜೂಲಿ ಬ್ರಿಸ್ಕ್‌ಮನ್ ಪರವಾಗಿ ‘ಗೋಫಂಡ್‌ಮೀ’ ನಿಧಿ ಅಭಿಯಾನ ಆರಂಭಗೊಂಡಂದಿನಿಂದ, 3,000ಕ್ಕೂ ಅಧಿಕ ಮಂದಿ 5 ಡಾಲರ್ (ಸುಮಾರು 326 ರೂಪಾಯಿ) ನಿಂದ 250 ಡಾಲರ್ (ಸುಮಾರು 16,310 ರೂಪಾಯಿ) ದೇಣಿಗೆ ನೀಡಿದ್ದಾರೆ.

ಅಕ್ಟೋಬರ್ 28ರಂದು ವರ್ಜೀನಿಯದ ಸ್ಟರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಶನಲ್ ಗಾಲ್ಫ್ ಕೋರ್ಸ್‌ನಿಂದ ಟ್ರಂಪ್ ಹೊರ ಹೋಗುತ್ತಿದ್ದಾಗ, ಅವರ ವಾಹನಗಳ ಸಾಲಿನತ್ತ ಸೈಕಲ್‌ನಲ್ಲಿ ಹೋಗುತ್ತಿದ್ದ ಮಹಿಳೆ ತಿರಸ್ಕಾರ ಸೂಚಕವಾಗಿ ನಡುಬೆರಳು ಎತ್ತಿದ್ದರು.

ಅದನ್ನು ಶ್ವೇತಭವನದ ಛಾಯಾಚಿತ್ರಗ್ರಾಹಕರು ಸೆರೆಹಿಡಿದಿದ್ದರು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಅದಾದ ಮೂರು ದಿನಗಳ ಬಳಿಕ, 50 ವರ್ಷದ ಬ್ರಿಸ್ಕ್‌ಮನ್‌ರನ್ನು ಅವರ ಕಂಪೆನಿ ಅಕಿಮ ಕೆಲಸದಿಂದ ತೆಗೆದುಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News