ಸುಝಾನ್ ಬೀಗಮುದ್ರೆ ತೆರವಿಗೆ ಸಿಐಟಿಯು ಆಗ್ರಹ
Update: 2017-11-15 22:53 IST
ಉಡುಪಿ, ನ.15: ಕೈಗಾರಿಕಾ ಎಸ್‌ಇಝೆಡ್ ಅಭಿವೃದ್ಧಿಗಾಗಿ ಸುಮಾರು 642 ಎಕರೆ ಜಾಗವನ್ನು ಕೆಐಎಡಿಬಿಯಿಂದ ಪಡೆದಿದ್ದ ಸುಝ್ಲಿನ್ ಕಂಪೆನಿ ನ್ಯಾಯಬಾಹಿರ ಹಾಗೂ ಕಾನೂನು ಬಾಹಿರವಾಗಿ ಲಾಕೌಟ್‌ನ್ನು ಘೋಷಿಸಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿರುವುದನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ. ವಿಶ್ವನಾಥ ರೈ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಖಂಡಿಸಿದ್ದಾರೆ.
ಈ ಕೂಡಲೇ ಕಂಪೆನಿಯು ಬೀಗ ಮುದ್ರೆಯನ್ನು ಹಿಂದೆಗೆದುಕೊಂಡು ಎಲ್ಲಾ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡು ಕಂಪೆನಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದೆ.