×
Ad

ಕಾರ್ಯಕರ್ತರಿಂದ ಕಾಲಿಗೆ ಮಸಾಜ್ ಮಾಡಿಸಿಕೊಂಡ ಉತ್ತರ ಪ್ರದೇಶ ಸಚಿವ!

Update: 2017-11-16 14:22 IST

ಹೊಸದಿಲ್ಲಿ, ನ.16: ಉತ್ತರ ಪ್ರದೇಶ ಸರಕಾರದ ಸಚಿವರೊಬ್ಬರು ಕಾರ್ಯಕರ್ತರಿಂದ ಕಾಲಿಗೆ ಮಸಾಜ್ ಮಾಡಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋವೊಂದು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿರುವವರನ್ನು ಸಚಿವ ನಂದಗೋಪಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಸಚಿವರ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ.

‘ಭಟ್ಟಂಗಿತನ’, “ಯಾಕಾಗಿ ಜನರು ಹೀಗೆಲ್ಲಾ ಮಾಡುತ್ತಾರೆ, ಮಸಾಜ್ ಮಾಡಿದವನು ಹಾಗು ಸಚಿವರು ಇಬ್ಬರಿಗೂ ಸ್ವಾಭಿಮಾನವಿಲ್ಲ”, “ಶೇಮ್ ಬಿಜೆಪಿ ಶೇಮ್, ನಿಮಗೆ ಚಪ್ಪಲಿಯಿಂದ ಮಸಾಜ್ ಮಾಡಬೇಕು” ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News