ನ.18: ಕೊಂಕಣಿ ತೋಂಡಿ ಸಾಹಿತ್ಯ ಪ್ರಾತ್ಯಕ್ಷಿಕೆ
Update: 2017-11-16 19:02 IST
ಮಂಗಳೂರು, ನ.16: ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ನ.18ರಂದು ಸಂಜೆ 6ಕ್ಕೆ ಕೊಂಕಣಿ ತೋಂಡಿ ಸಾಹಿತ್ಯ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ.
ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಚಂದ್ರಿಕಾ ಮಲ್ಯ, ಮರೋಳಿ ಸಬಿತಾ ಕಾಮತ್, ಮಾಲತಿ ಕಾಮತ್ ಸಂಪನ್ಮೂಲ ವ್ಯಕ್ತಿಗಳಾಗಿ ನೆರವೇರಿಸುವರು ಎಮದು ಸಂಯೋಜಕ ಡಾ. ಅರವಿಂದ ಶ್ಯಾನಭಾಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.