ಹವಾಮಾನ ಒಪ್ಪಂದ ವಿರೋಧಿಗಳು ‘ವಿಕೃತರು’: ಪೋಪ್

Update: 2017-11-16 17:24 GMT

ವ್ಯಾಟಿಕನ್ ಸಿಟಿ, ನ. 16: ಜಾಗತಿಕ ತಾಪಮಾನದ ಹಿಂದಿರುವ ವಿಜ್ಞಾನವನ್ನು ನಿರಾಕರಿಸುವವರನ್ನು ತರಾಟೆಗೆ ತೆಗೆದುಕೊಂಡಿರುವ ಪೋಪ್ ಫ್ರಾನ್ಸಿಸ್, ಇಂಥ ‘ವಿಕೃತ ಪ್ರವೃತ್ತಿ’ಗೆ ಬಲಿಬೀಳದಂತೆ ಜರ್ಮನಿಯಲ್ಲಿ ನಡೆಯುತ್ತಿರುವ ಹವಾಮಾನ ಮಾತುಕತೆಯ ಸಂಧಾನಕಾರರನ್ನು ಒತ್ತಾಯಿಸಿದ್ದಾರೆ.

ಬದಲಿಗೆ, ಜಾಗತಿಕ ತಾಪಮಾನ ಹೆಚ್ಚಿಸುವ ಅನಿಲಗಳ ಉತ್ಪಾದನೆಯನ್ನು ನಿಗ್ರಹಿಸುವ ಕ್ರಮಗಳನ್ನು ಹೆಚ್ಚಿಸುವಂತೆ ಅವರು ಕರೆ ನೀಡಿದ್ದಾರೆ.

ಜರ್ಮನಿಯ ಬಾನ್‌ನಲ್ಲಿ ಹವಾಮಾನ ಮಾತುಕತೆಗಳು ನಡೆಯುತ್ತಿವೆ.

ಪೋಫ್ ಫ್ರಾನ್ಸಿಸ್ ಯಾವುದೇ ದೇಶವನ್ನು ಹೆಸರಿಸಿಲ್ಲ. ಆದರೆ, 2015ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News