11 ಜ್ಯೋತಿರ್ವರ್ಷ ದೂರದಲ್ಲಿ ಭೂಮಿಯಂಥ ಗ್ರಹ

Update: 2017-11-16 17:28 GMT

ಲಾಸ್ ಏಂಜಲಿಸ್, ನ. 16: ಸೂರ್ಯನಿಂದ 11 ಜ್ಯೋತಿರ್ವರ್ಷ ದೂರದಲ್ಲಿರುವ ‘ರಾಸ್ 128’ ಎಂಬ ನಕ್ಷತ್ರದ ಸುತ್ತ ಭೂಮಿಯನ್ನು ಹೋಲುವ ಗ್ರಹವೊಂದು ಸುತ್ತುತ್ತಿದೆ ಎಂಬುದಾಗಿ ವಿಜ್ಞಾನಿಗಳು ವರದಿ ಮಾಡಿದ್ದಾರೆ.

ಇದು ಭೂಮಿಯಿಂದ ಹೊರಗೆ ಜೀವ ಇರಬಹುದಾದ ಸಾಧ್ಯತೆಗೆ ಇಂಬು ನೀಡಿದೆ.

ನೂತನ ಗ್ರಹದಲ್ಲಿ ನೀರು ಇರಬಹುದು ಹಾಗೂ ಜೀವಕ್ಕೆ ಪೂರಕವಾದ ವಾತಾವರಣವೂ ಇರಬಹುದು ಎಂಬುದಾಗಿ ‘ಆಸ್ಟ್ರೋನಮಿ ಆ್ಯಂಡ್ ಆ್ಯಸ್ಟ್ರೊಫಿಸಿಕ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News