ಸೂಡಾದಲ್ಲಿ ಬೃಹತ್ ಶಿಲಾಯುಗದ ‘ಗುಹಾ ಸಮಾಧಿ’ ಪತ್ತೆ
ಉಡುಪಿ, ನ.16: ಜಿಲ್ಲೆಯ ಕಾರ್ಕಳ ತಾಲೂಕಿನ ಸೂಡದ ಸುಬ್ರಹ್ಮಣ್ಯ ದೇವಾಲಯದ ಪಕ್ಕದಲ್ಲಿ ಬೃಹತ್ ಶಿಲಾಯುಗದ ಗುಹಾ ಸಮಾಧಿಯೊಂದು ಪತ್ತೆಯಾಗಿದೆ ಎಂದು ಶಿರ್ವ ಎಂ.ಎಸ್.ಆರ್.ಎಸ್.ಕಾಲೇಜಿನ ಪುರಾತತ್ವ ಇತಿಹಾಸ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಂಪು ಮುರಕಲ್ಲಿನಲ್ಲಿ, ಪ್ರಸ್ತುತ ನೆಲಮಟ್ಟದಿಂದ ಸುಮಾರು 3 ಅಡಿ ಆಳದಲ್ಲಿ ಅರ್ಧ ಗೋಳಾಕಾರದ ಗುಹೆಯನ್ನು ರಚಿಸಲಾಗಿದೆ. ಸುಮಾರು ಒಂದು ಮೀ. ಉದ್ದದ, 2 ಅಡಿ ಸುತ್ತಳತೆಯ ವೃತ್ತಾಕಾರದ ಏಕೈಕ ಪ್ರವೇಶ ದ್ವಾರವನ್ನು ರಚಿಸಲಾಗಿದೆ. ಈ ಪ್ರವೇಶ ದ್ವಾರವನ್ನು ಗ್ರಾನೈಟ್ ಶಿಲೆಯಿಂದ ಮುಚ್ಚಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಲಾಗಿದೆ.
13°12’50"N-74°51’45"E ಪ್ರಸ್ತುತ ಸ್ಥಳವನ್ನು ಸಮತಟ್ಟು ಮಾಡುವಾಗ ಈ ಗುಹಾ ಸಮಾಧಿ ಬೆಳಕಿಗೆ ಬಂದಿದೆ. ಈ ಸಮಾಧಿಯು ನಲ್ಲಿದೆ. ಒಳಗೆ ಮಣ್ಣು ಕುಸಿದು ಬಿದ್ದಿರುವುದರಿಂದ ಬೇರೆ ಯಾವುದೇ ಪ್ರಾಚೀನ ಅವಶೇಷ ಗಳನ್ನು ಅಲ್ಲಿಂದ ಸಂಗ್ರಹಿಸಲು ಸಾದ್ಯವಾಗಿಲ್ಲ. ಇಂತಹುದೇ ಗುಹಾ ಸಮಾಧಿಗಳು ಸೂಡದ ಪಾಲುಮನೆ ಹಾಗೂ ಸಾಂತೂರಿನಲ್ಲಿ ಕಂಡು ಬಂದಿದ್ದು ಅವುಗಳಲ್ಲಿ ದೊರೆತ ಮಡಕೆ ಅವಶೇಷಗಳನ್ನು ಕಾಲೇಜಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಪ್ರಸ್ತುತ ಸ್ಥಳವನ್ನು ಸಮತಟ್ಟು ಮಾಡುವಾಗ ಈ ಗುಹಾ ಸಮಾಧಿ ಬೆಳಕಿಗೆ ಬಂದಿದೆ. ಈ ಸಮಾಧಿಯು ನಲ್ಲಿದೆ. ಒಳಗೆ ಮಣ್ಣು ಕುಸಿದು ಬಿದ್ದಿರುವುದರಿಂದ ಬೇರೆ ಯಾವುದೇ ಪ್ರಾಚೀನ ಅವಶೇಷ ಗಳನ್ನು ಅಲ್ಲಿಂದ ಸಂಗ್ರಹಿಸಲು ಸಾದ್ಯವಾಗಿಲ್ಲ. ಇಂತಹುದೇ ಗುಹಾ ಸಮಾಧಿಗಳು ಸೂಡದ ಪಾಲುಮನೆ ಹಾಗೂ ಸಾಂತೂರಿನಲ್ಲಿ ಕಂಡು ಬಂದಿದ್ದು ಅವುಗಳಲ್ಲಿ ದೊರೆತ ಮಡಕೆ ಅವಶೇಷಗಳನ್ನು ಕಾಲೇಜಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ಮಹತ್ವ: ಉಡುಪಿ ಜಿಲ್ಲೆಯಾದ್ಯಂತ ನೂರಾರು ಸಂಖ್ಯೆಯಲ್ಲಿ ಕಂಡು ಬಂದಿರುವ ಈ ಗುಹಾ ಸಮಾಧಿಗಳು ಕಾಲಮಾನದ ದೃಷ್ಠಿಯಿಂದ ಸುಮಾರು ಕ್ರಿ.ಪೂ. 800ರಿಂದ ಕ್ರಿ.ಶ.200ರ ಕಾಲದಲ್ಲಿ ರಚನೆಯಾಗಿವೆ. ಪ್ರಸ್ತುತ ಸಮಾಧಿ ಯನ್ನು ಸರಿ ಸುಮಾರು ಕ್ರಿ.ಪೂ. 500ರಲ್ಲಿ ರಚಿಸಲಾಗಿದೆ ಎಂದು ಪಾಲುಮನೆ ಮತ್ತು ಸಾಂತೂರಿನ ಸಮಾಧಿಗಳ ಅಧ್ಯಯನದ ಹಿನ್ನೆಲೆಯಲ್ಲಿ ಭಾವಿಸಲಾಗಿದೆ. ಜಿಲ್ಲೆಯ ಬಹುತೇಕ ಬೃಹತ್ ಶಿಲಾಯುಗದ ಸಮಾಧಿಗಳು ದೇವಾಲಯ, ಆಲಡೆ ಮತ್ತು ನಾಗ ಬ್ರಹ್ಮಸ್ಥಾನಗಳ ಸಮೀಪದಲ್ಲಿ ಕಂಡು ಬಂದಿವೆ. ಇದರಿಂದ ತುಳುನಾಡಿನ ಆರಾಧನಾ ಪರಂಪರೆ ಮೂಲತಃ ಸಮಾಧಿ ಅಥವಾ ಸಾವಿನ ಆರಾಧನಾ ಸಂಪ್ರದಾಯದ ಮೂಲಕ್ಕೆ ಸಂಬಂಧಿಸಿದ ಸಂಪ್ರದಾಯಗಳೆಂದು ನಂಬಬಹುದಾಗಿದೆ.
ಸೂಡ ಸುಬ್ರಮಣ್ಯ ದೇವಾಲಯದ ಅನುವಂಶಿಕ ಮೊಕ್ತೇಸರ ಜಯಶೀಲ ಹೆಗ್ಡೆ, ಸೂಡ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಿತೇಶ್ ಕುಮಾರ್ ಶೆಟ್ಟಿ, ಅರ್ಚಕ ಶ್ರೀಶ ಭಟ್, ಗ್ರಾಮಸ್ಥರಾದ ಗಣೇಶ್ ಶೆಟ್ಟಿ ಮತ್ತು ಸೋಮನಾಥ್ ಹೆಗ್ಡೆ ಸಮಾಧಿಯ ಅಧ್ಯಯನಕ್ಕೆ ಸಹಕರಿಸಿದರು ಎಂದು ಅವರು ತಿಳಿಸಿದ್ದಾರೆ. ಪ್ರೊ.ಟಿ.ಮುರುಗೇಶಿ ಅವರ ಸಂಪರ್ಕ ಸಂಖ್ಯೆ:9482520933.