ಯಮನ್‌ನಲ್ಲಿ ದಿಗ್ಬಂಧನ: ಪ್ರತಿ ದಿನ 130 ಮಕ್ಕಳು ಮೃತ್ಯು
Update: 2017-11-17 23:36 IST
ಕೈರೋ (ಈಜಿಪ್ಟ್), ನ. 17: ಯುದ್ಧಪೀಡಿತ ಯಮನ್‌ನಲ್ಲಿ ಹಸಿವೆ ಮತ್ತು ರೋಗದಿಂದಾಗಿ ಪ್ರತಿ ದಿನ 130ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ನೆರವು ಸಂಘಟನೆ 'ಸೇವ್ ದ ಚಿಲ್ಡ್ರನ್' ಹೇಳಿದೆ.
2017ರಲ್ಲಿ ಈವರೆಗೆ 50,000ಕ್ಕೂ ಅಧಿಕ ಮಕ್ಕಳು ಮೃತಪಟ್ಟಿದ್ದಾರೆ ಎಂದು ಅದು ತಿಳಿಸಿದೆ.
ಈ ತಿಂಗಳ ಆದಿ ಭಾಗದಲ್ಲಿ ಬಂಡುಕೋರರು ಕ್ಷಿಪಣಿಯೊಂದನ್ನು ರಿಯಾದ್‌ನತ್ತ ಉಡಾಯಿಸಿದ ಬಳಿಕ ಯಮನ್‌ನ ಬಂದರುಗಳನ್ನು ಸೌದಿ ಅರೇಬಿಯ ಮುಚ್ಚಿದೆ.
ಈ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ದಿಗ್ಬಂಧನವನ್ನು ತೆರವುಗೊಳಿಸುವುದಾಗಿ ಸೌದಿ ಅರೇಬಿಯ ಸೋಮವಾರ ತಿಳಿಸಿದೆ.
ದಿಗ್ಬಂಧನವನ್ನು ತೆರವುಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮತ್ತು ವಿಶ್ವ ಆಹಾರ ಕಾರ್ಯಕ್ರಮದ ನಾಯಕರು ಗುರುವಾರ ಜಂಟಿ ಮನವಿಯೊಂದನ್ನು ಹೊರಡಿಸಿದ್ದಾರೆ.