ಔಟ್ ಆಗುವುದರಿಂದ ಬಚಾವಾಗಲು ಡ್ರೆಸ್ಸಿಂಗ್‌ರೂಮ್ ಸಹಾಯ ಪಡೆದ ಪೆರೇರ!

Update: 2017-11-19 12:33 GMT

ಕೋಲ್ಕತಾ, ನ.19: ಶ್ರೀಲಂಕಾದ ಬ್ಯಾಟ್ಸ್‌ಮನ್ ದಿಲ್‌ರುವಾನ್ ಪೆರೇರ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅಂಪೈರ್ ನೀಡಿದ ಎಲ್‌ಬಿಡಬ್ಲು ತೀರ್ಪನ್ನು ಪರಾಮರ್ಶಿಸಲು ಡಿಆರ್‌ಎಸ್ ಪದ್ಧತಿಯ ಮೊರೆ ಹೋಗುವ ಮೊದಲು ಡ್ರೆಸ್ಸಿಂಗ್ ರೂಮ್‌ನ ಸಹಾಯ ಪಡೆದಿದ್ದಾರೆ. ಅವರ ಈ ವರ್ತನೆಯು ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್‌ರ ವಿವಾದಾತ್ಮಕ ಘಟನೆಯನ್ನು ನೆನಪಿಸಿತು.

  57ನೆ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆದಿದೆ. ಮುಹಮ್ಮದ್ ಶಮಿಯ ಬೌಲಿಂಗ್‌ನಲ್ಲಿ ಪೆರೇರ ವಿರುದ್ಧ ಅಂಪೈರ್ ನಿಗೆಲ್ ಲಾಂಗ್ ಎಲ್‌ಬಿಡಬ್ಲ್ಯು ತೀರ್ಪು ನೀಡಿದರು. ಆಗ ತನ್ನ ಜೊತೆಗಾರ ರಂಗನ ಹೆರಾತ್‌ರತ್ತ ನೋಡಿದ ಪೆರೇರ ಪೆವಿಲಿಯನ್‌ನತ್ತ ನಡೆದರು. ಡ್ರೆಸ್ಸಿಂಗ್‌ರೂಮ್‌ನತ್ತ ತಿರುಗಿ ಸಹಾಯ ಪಡೆಯಲೆತ್ನಿಸಿದರು. ಈ ಎಲ್ಲ ಘಟನೆಯು ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆಗ ವೀಕ್ಷಕವಿವರಣೆಗಾರರು ಸ್ಟೀವ್ ಸ್ಮಿತ್‌ರ ‘ಚೀಟ್‌ಗೇಟ್’ ವಿವಾದವನ್ನು ನೆನಪಿಸಿದರು.

ಪೆರೇರ ಡ್ರೆಸ್ಸಿಂಗ್ ರೂಮ್‌ನಿಂದ ಸಹಾಯ ಪಡೆದರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಔಟ್ ಶೂನ್ಯಕ್ಕೆ ಔಟ್ ಆಗುವುದರಿಂದ ಬಚಾವಾದರು.

ಮಾರ್ಚ್‌ನಲ್ಲಿ ನಡೆದಿದ್ದ ಬೆಂಗಳೂರು ಟೆಸ್ಟ್‌ನಲ್ಲಿ ಸ್ಮಿತ್ ಔಟಾದಾಗ ಡಿಆರ್‌ಎಸ್ ಮೊರೆ ಹೋಗುವ ಮೊದಲು ಡ್ರೆಸ್ಸಿಂಗ್‌ರೂಮ್‌ನ ಸಹಾಯ ಪಡೆದಿದ್ದರು. ಸ್ಮಿತ್ ವರ್ತನೆಯನ್ನು ಖಂಡಿಸಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ, ಸ್ಮಿತ್‌ರನ್ನು ಮೋಸಗಾರ ಎಂದು ನಿಂದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News