ಅಂಡರ್-19 ಏಷ್ಯಾಕಪ್: ಅಫ್ಘಾನಿಸ್ತಾನ ಚಾಂಪಿಯನ್

Update: 2017-11-19 13:42 GMT

ಕೌಲಾಲಂಪುರ, ನ.19: ಪಾಕಿಸ್ತಾನವನ್ನು ಫೈನಲ್ ಪಂದ್ಯದಲ್ಲಿ ಮಣಿಸಿರುವ ಅಫ್ಘಾನಿಸ್ತಾನ ಅಂಡರ್-19 ತಂಡ ಏಷ್ಯಾಕಪ್‌ನ್ನು ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಅಫ್ಘಾನಿಸ್ತಾನ ತಂಡ ಪಾಕಿಸ್ತಾನವನ್ನು 185 ರನ್‌ಗಳಿಂದ ಮಣಿಸುವ ಮೂಲಕ ಚೊಚ್ಚಲ ಏಷ್ಯಾಕಪ್‌ನ್ನು ತನ್ನದಾಗಿಸಿಕೊಂಡಿತು.

ಗೆಲುವಿಗೆ 249 ರನ್ ಚೇಸಿಂಗ್ ಮಾಡಿದ ಪಾಕಿಸ್ತಾನ 22.1 ಓವರ್‌ಗಳಲ್ಲಿ ಕೇವಲ 63 ರನ್‌ಗೆ ಆಲೌಟಾಯಿತು. 7.1 ಓವರ್‌ಗಳಲ್ಲಿ 13 ರನ್‌ಗೆ 5 ವಿಕೆಟ್ ಉಡಾಯಿಸಿ ಪಾಕ್‌ಗೆ ಸಿಂಹಸ್ವಪ್ನರಾದ ಮಜೀಬ್ ಝದ್ರಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಫ್ಘಾನ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಪಾಕ್‌ನ 9 ದಾಂಡಿಗರು ಎರಡಂಕೆ ಗಳಿಸಲು ವಿಫಲರಾದರು.

ಅಫ್ಘಾನಿಸ್ತಾನ ಶುಕ್ರವಾರ ನೇಪಾಳ ತಂಡವನ್ನು ಮಣಿಸುವ ಮೂಲಕ ಫೈನಲ್‌ಗೆ ತಲುಪಿದ್ದರೆ, ಪಾಕ್ ತಂಡ ಬಾಂಗ್ಲಾದೇಶವನ್ನು ಡಿಎಲ್ ನಿಯಮದ ಪ್ರಕಾರ ಮಣಿಸಿ ಫೈನಲ್‌ಗೆ ತಲುಪಿತ್ತು. ಅಫ್ಘಾನಿಸ್ತಾನ ಕಳೆದ ಮೂರು ಆವೃತ್ತಿಯಲ್ಲಿ ಸೆಮಿ ಫೈನಲ್‌ನಲ್ಲಿ ಮುಗ್ಗರಿಸಿತ್ತು.

ರವಿವಾರ ನಡೆದ ಫೈನಲ್‌ನಲ್ಲಿ ಟಾಸ್ ಜಯಿಸಿದ ಪಾಕ್ ತಂಡ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿತು.ಆರಂಭಿಕ ಆಟಗಾರರಾದ ರಹ್ಮಾನ್ ಗುಲ್ ಹಾಗೂ ಇಬ್ರಾಹಿಂ ಝದ್ರಾನ್ ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿ ಅಫ್ಘಾನ್ ತಂಡಕ್ಕೆ ಉತ್ತಮ ಆರಂಭ ನೀಡಿದರು.

ರಹ್ಮಾನ್ 17ನೇ ಓವರ್‌ನಲ್ಲಿ ಔಟಾದರು. ಆಗ ತಂಡಕ್ಕೆ ಆಸರೆಯಾದ ಇಕ್ರಂ ಫೈಝಿ ಅಜೇಯ 107 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News