ಮಂಜನಾಡಿ: ತಡೆಗೋಡೆ ಕಾಮಗಾರಿಗೆ ಚಾಲನೆ
ಉಳ್ಳಾಲ, ನ.19: ಮಂಜನಾಡಿ ಗ್ರಾಮದ ಕಟ್ಟೆಮಾರುವಿನಲ್ಲಿ ಕಿರು ನೀರಾವರಿ ಯೋಜನೆಯಡಿ ಚರಂಡಿಗೆ ತಡೆಗೋಡೆ ಕಾಮಗಾರಿಗೆ ಸಚಿವ ಯು.ಟಿ.ಖಾದರ್ ರವಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಂಜನಾಡಿ ಗ್ರಾಪಂ ವ್ಯಾಪ್ತಿಯ ರಸ್ತೆಗಳಿಗೆ 7 ಕೋ.ರೂ. ಅನುದಾನ ಮಂಜೂರಾಗಿದೆ. ಅದರಲ್ಲಿ ಕಲ್ಕಟ್ಟದಿಂದ ಉರುಮಣೆಗೆ ಸಂಪರ್ಕಿಸುವ ನೂತನ ರಸ್ತೆಗೆ 50 ಲಕ್ಷ ರೂ. ವಿಶೇಷ ಅನುದಾನ, ಮೊಂಟೆಪದವು ಪ್ರಮುಖ ರಸ್ತೆಯ ಕಾಂಕ್ರಿಟೀಕರಣ, ಮೊಂಟೆಪದವಿನಿಂದ ಲಾಡೆ, ಸಾರೆತಬೈಲು ರಸ್ತೆ, ಉರುಮಣೆ ಕಲ್ಕಟ್ಟ ಶಾಲೆಯ 2 ಅಡ್ಡ ರಸ್ತೆಗಳು, ಕಲ್ಕಟ್ಟ ಜಯನಗರ ರಸ್ತೆ, ಕಲ್ಕಟ್ಟ ಮಸೀದಿಯಿಂದ ಖಂಡಿಗೆ ಉರುಮಣೆ 50 ಲಕ್ಷ ರೂ, ನಾಟೆಕಲ್ ಸೈಟ್ ಮುಖ್ಯ ರಸ್ತೆ, ನಾಟೆಕಲ್ ಸೈಟ್, ಉರುಮಣೆ ಪಾರೆ, ಪದಲೀಕಟ್ಟೆ ರಸ್ತೆ, ಅಸೈ ರಸ್ತೆ, ಸಾಮಣಿಗೆ ರಸ್ತೆಗಳಿಗೆ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.
ಮಂಜನಾಡಿ ಜುಮಾ ಮಸೀದಿ ಹತ್ತಿರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ, ತೊಕ್ಕೊಟ್ಟು ಸಂತ ಸಬೆಸ್ತಿಯನ್ನರ ಚರ್ಚ್ ಸಮೀಪ ಹಾಗೂ ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ವಠಾರಗಳಲ್ಲಿ ಯಾತ್ರಿ ನಿವಾಸಗಳಿಗೆ ಅನುದಾನ ಮಂಜೂರಾಗಿದ್ದು, ಶೀಘ್ರವೇ ನಿರ್ಮಾಣವಾಗಲಿದೆ ಎಂದು ಖಾದರ್ ತಿಳಿಸಿದರು.
ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಎನ್.ಎಸ್. ಕರೀಂ, ಕಿನ್ಯಾ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಸದಸ್ಯ ಅಬೂಸಾಲಿ, ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಎಂ.ಎಸ್ ರಫೀಕ್, ಕೊಣಾಜೆ ಗ್ರಾಪಂ ಸದಸ್ಯ ನಝಾರ್ ಷಾ ಪಟ್ಟೋರಿ, ಮಾಜಿ ತಾಪಂ ಮಾಜಿ ಸದಸ್ಯ ನೆಕ್ಕರೆ ಬಾವ, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಸದಸ್ಯರಾದ ಕುಂಞಿ ಬಾವ ಹಾಜಿ, ಅಬ್ದುಲ್ ಖಾದರ್ ಕಲ್ಕಟ್ಟ, ಕೆ.ಪಿ.ಅಶ್ರಫ್, ಮಂಜನಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಯುತ್ ಕಾಂಗ್ರೆಸ್ ಮಂಜನಾಡಿ ಗ್ರಾಮದ ಸದಸ್ಯರಾದ ಇಸಾಕ್ ಸ್ಟಾರ್, ಆಸೀಫ್ ಕಂಡಿಕ, ಸಿದ್ದೀಕ್ ಕಲ್ಕಟ್ಟ, ಇರ್ಫಾನ್ ಕಂಡಿಕ ಉಪಸ್ಥಿತರಿದ್ದರು.