ಉಳಿತೊಟ್ಟು: ಅಲ್-ಇಖ್ವಾನ್ ಕಮಿಟಿ ವತಿಯಿಂದ ರಸ್ತೆ ದುರಸ್ತಿ, ಶ್ರಮಾದಾನ
Update: 2017-11-19 22:18 IST
ನೆಲ್ಯಾಡಿ, ನ. 19: ಅಲ್-ಇಖ್ವಾನ್ ಕಮಿಟಿ ಉಳಿತೊಟ್ಟು, ನೆಲ್ಯಾಡಿ ಇದರ ವತಿಯಿಂದ ಕಮಿಟಿಯ ದಶಮಾನೋತ್ಸವದ ಅಂಗವಾಗಿ ನೆಲ್ಯಾಡಿ ಬಲ್ಯ ರಸ್ತೆ ದುರಸ್ತಿ ಹಾಗೂ ಶ್ರಮಾದಾನ ಪಡುಬೆಟ್ಟಿನಲ್ಲಿ ನಡೆಯಿತು.
ಉಳಿತೊಟ್ಟು ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಸಖಾಫಿ ದುವಾ ಮಾಡುವ ಮೂಲಕ ಚಾಲನೆ ನೀಡಿದರು.
ಗ್ರಾ.ಪಂ. ಸದಸ್ಯರಾದ ಗಂಗಾಧರ ಶೆಟ್ಟಿ ಹೊಸಮನೆ ಆಗಮಿಸಿ ಶುಭಹಾರೈಸಿದರು. ಕಮಿಟಿಯ ಅಧ್ಯಕ್ಷ ಗ್ರಾ. ಪಂ. ಸದಸ್ಯ ಶೇಕ್ ಶಬ್ಬೀರ್ ಸಾಹೇಬ್, ಮಸೀದಿ ಅಧ್ಯಕ್ಷ ಹಾಜಿ ಯು ಉಮರಬ್ಬ, ಕಮಿಟಿಯ ಉಪಾಧ್ಯಕ್ಷ ರಫೀಕ್ ಉಳಿತೊಟ್ಟು, ದಾವೂದ್ ಬಿಲಾಲ್, ಕಾರ್ಯದರ್ಶಿ ಹೈದರ್ ತಾಜ್ ಹಾಗೂ ಅಲ್-ಇಖ್ವಾನ್ ಕಮಿಟಿಯ ಸದಸ್ಯರು, ಜಮಾಅತರು ಊರಿನವರು ಭಾಗವಹಿಸಿಧ್ದರು.
ಕಾರ್ಯದರ್ಶಿ ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.