×
Ad

ಅಲ್-ಮದೀನಾ ಹುಬ್ಬುರ್ರಸೂಲ್ ಕಾನ್ಫರೆನ್ಸ್‌ಗೆ ಚಾಲನೆ

Update: 2017-11-19 22:21 IST

ಕೊಣಾಜೆ, ನ. 19: ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ವತಿಯಿಂದ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನ, 21, 22, 23 ರಂದು ಮಂಜನಾಡಿ ಅಲ್-ಮದೀನಾ ಕ್ಯಾಂಪಸ್‌ನಲ್ಲಿ ನಡೆಯಲಿದ್ದು ರವಿವಾರ ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅವರು ಧ್ವಜಾರೋರಾಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಪ್ರವಾದಿಯವರ ಹೆಸರಿನಲ್ಲಿ ಸ್ಥಾಪಿಸಿದ ಅಲ್-ಮದೀನಾ ಸಂಸ್ಥೆ ಹಲವು ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಪ್ರವಾದಿಯವರು ಜನಿಸಿದ ಮಾಸದಲ್ಲಿ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಮೌಲಿದ್ ಪಾರಾಯಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಈ ವರ್ಷವೂ ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದರು.

ಸಯ್ಯದ್ ಉಮರ್ ಸಖಾಫಿ ತಂಙಳ್ ಮನ್ಸಶರ್ ದುಅ ನೆರವೇರಿಸಿದರು. ಉದ್ಯಮಿ ಎಸ್.ಕೆ ಅಬ್ದುಲ್ ಖಾದರ್ ಹಾಜಿ, ಅಲ್-ಮದೀನಾ ಶಾಲಾ ಸಂಚಾಲಕ ಅಬ್ದುಲ್ಲ ಹಾಜಿ ಮೋರ್ಲ, ಶೌಕತ್ ಅಲಿ ಹಾಜಿ ದೇರಳಕಟ್ಟೆ, ಮುದರ್ರಿಸ್ ಮುಹಮ್ಮದ್ ಕುಂಞ ಅಂಜಾದಿ, ಮುನೀರ್ ಅಹ್ಮದ್ ಸಖಾಫಿ, ಕೆ.ಎ.ಕೆ ಮಂಜನಾಡಿ, ಮನೀರ್ ಹೀಮಾಮಿ, ಹುಸೈನ್ ಉದ್ಯಾವರ, ಎಸ್ಸೆಸ್ಸೆಫ್ ಮುಖಂಡ ಸಾಧಿಕ್ ಮಾಸ್ಟರ್ ಮಳೆಬೆಟ್ಟು, ಅಬುರ್ರಹ್ಮಾನ್ ಅಹ್ಸನಿ, ಅಬ್ದುಲ್ ಅಝೀರ್ ಅಹ್ಸನಿ, ಅಬ್ದುಲ್ ಸಲಾಂ ಅಹ್ಸನಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News