ಅರ್ಜೆಂಟೀನಾ: ನಾಪತ್ತೆಯಾದ ಸಬ್‌ಮೆರೀನ್‌ನಿಂದ ಸಿಗ್ನಲ್‌ಗಳು ಪತ್ತೆ

Update: 2017-11-19 18:08 GMT

ಬ್ಯೂನಸ್‌ಐರಿಸ್,ಆ.19: ಕಳೆದ ಬುಧವಾರದಿಂದ ಕಾಣೆಯಾಗಿರುವ 44 ಮಂದಿ ಸಿಬ್ಬಂದಿಯಿದ್ದ ಅರ್ಜೆಂಟೀನಾ ಜಲಾಂತರ್ಗಾಮಿ ನೌಕೆಯು ಕಳುಹಿಸಿರುವ ಉಪಗ್ರಹದ ಮೂಲಕ ಕಳುಹಿಸಿರುವ ಕೆಲವು ಸಿಗ್ನಲ್‌ಗಳನ್ನು ಪತ್ತೆಹಚ್ಚಲಾಗಿದ್ದು, ಇದರೊಂದಿಗೆ ನೌಕೆಯಲ್ಲಿರುವವರು ಬದುಕಿರುವ ಸಾಧ್ಯತೆಯ ಬಗ್ಗೆ ಆಶಾವಾದ ಮೂಡಿದೆಯೆಂದು ರಕ್ಷಣಾ ಸಚಿವಾಲಯ ರವಿವಾರ ತಿಳಿಸಿದೆ.

 ಈ ಸ್ಯಾಟಲೈಟ್‌ಗಳು ಸಿಗ್ನಲ್‌ಗಳು ಉಗಮಗೊಂಡ ಸ್ಥಳವನ್ನು ಪತ್ತೆಹಚ್ಚಲು ರಕ್ಷ ಣಾ ಸಚಿವಾಲಯ ಪ್ರಯತ್ನಿಸುತ್ತಿದೆ.

ದಕ್ಷಿಣ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲಿ ಕಾಣೆಯಾಗಿರುವ ಎಆರ್‌ಎ ಸಾನ್ ಜುವಾನ್ ಸಬ್‌ಮೆರೀನ್ ನೌಕೆಯ ಶೋಧಕಾರ್ಯಾಚರಣೆಯನ್ನು ಅರ್ಜೆಂಟೀನಾ ತೀವ್ರಗೊಳಿಸಿದ್ದು, ಆಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಶೋಧ ವಿಮಾನವು ಕೈಜೋಡಿಸಿದೆ.

 ಡೀಸೆಲ್ ಹಾಗೂ ವಿದ್ಯುತ್‌ಚಾಲಿತ ಈ ಸಬ್‌ಮೆರೀನ್, ಅರ್ಜೆಂಟೀನಾ ಕರಾವಳಿಯಿಂದ 230 ಕಿ.ಮೀ.ದೂರದ ಅಟ್ಲಾಂಟಿಕ್ ಸಾಗರಪ್ರದೇಶದಲ್ಲಿ ಬುಧವಾರ ಕಾಣೆಯಾಗಿತ್ತು. ವೇಗದಿಂದ ಬೀಸುವ ಗಾಳಿ ಹಾಗೂ ದೈತ್ಯಗಾತ್ರದ ಸಮುದ್ರದ ಅಲೆಗಳಿಂದಾಗಿ ಜಲಾಂತರ್ಗಾಮಿ ನೌಕೆಯ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಾಗಿ ಮೂಲಗಳು ಹೇಳಿವೆ.

ದಕ್ಷಿಣ ಅಮೆರಿಕದ ದಕ್ಷಿಣದ ತುದಿಯಲ್ಲಿರುವ ಉಶುಯಾಯಿಯಾದಿಂದ ಬ್ಯೂನಸ್ ಐರಿಸ್‌ನ ದಕ್ಷಿಣದಲ್ಲಿರುವ ತನ್ನ ನೌಕಾನೆಲೆಗೆ ಆಗಮಿಸುತ್ತಿದ್ದಾಗ ಜಲಾಂತರ್ಗಾಮಿ ನಾಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News