×
Ad

ಶಾಲೆಯ ಬಳಿ ಬಾಂಬ್ ಸಿಡಿದು 50 ಮಕ್ಕಳು ಅಸ್ವಸ್ಥ

Update: 2017-11-20 19:29 IST

ಜಲಪೈಗುರಿ,ನ.20: ಪ.ಬಂಗಾಳದ ಕೂಚ್‌ಬಿಹಾರ್ ಜಿಲ್ಲೆಯ ಶಾಲೆಯೊಂದರ ಬಳಿಯ ಮೈದಾನದಲ್ಲಿ ಸೋಮವಾರ ಪತ್ತೆಯಾದ ಬಾಂಬ್‌ವೊಂದನ್ನು ಬಾಂಬ್ ನಿಷ್ಕ್ರಿಯ ದಳವು ಸ್ಫೋಟಿಸುವ ಮೂಲಕ ವಿಲೇವಾರಿಗೊಳಿಸಿದ್ದು ,ಈ ಸಂದರ್ಭ ಕಿವಿ ಗಡಚಿಕ್ಕುವ ಭಾರೀ ಶಬ್ದ ಮತ್ತು ಹೊಗೆಯಿಂದಾಗಿ ಸುಮಾರು 50 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಈ ಮಕ್ಕಳನ್ನು ಹಲ್ದಿಬಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರನ್ನು ಪ್ರಥಮ ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿದೆ. 15 ಮಕ್ಕಳನ್ನು ಜಲಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳು ಉಸಿರಾಟದ ತೊಂದರೆ ಮತ್ತು ಕಿವಿಗಳಲ್ಲಿ ನೋವಿನ ಬಗ್ಗೆ ದೂರಿಕೊಂಡಿ ದ್ದಾರೆ, ಅಲ್ಲದೆ ಬಾಂಬ್‌ನಿಂದ ಹಾರಿದ ತುಣುಕುಗಳು ಕೆಲವು ಬಾಲಕರಿಗೆ ಬಡಿದಿವೆ ಎಂದು ಜಲಪೈಗುರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜಗನ್ನಾಥ ಸರ್ಕಾರ್ ತಿಳಿಸಿದರು.

ಬಾಂಬ್ ವಿಲೇವಾರಿಗೊಳಿಸಿದ ಸಂದರ್ಭ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News