×
Ad

ಮಾರಿಪಳ್ಳ: ನೂತನ "ಮೌಲಾ ಮಸ್ಜಿದ್" ಉದ್ಘಾಟನೆ

Update: 2017-11-20 20:09 IST

ಬಂಟ್ವಾಳ, ನ. 20: ಫರಂಗಿಪೇಟೆ ಸಮೀಪದ ಮಾರಿಪಳ್ಳದ ಜಲಾಲಿಯ ನಗರದಲ್ಲಿ ನೂತವಾಗಿ ನಿರ್ಮಿಸಿರುವ "ಮೌಲಾ ಮಸ್ಜಿದ್"ನ್ನು ಸಮಸ್ತ ಕೇರಳ ಮುಶಾವರದ ಸದಸ್ಯ ಶೈಖುನಾ ಎಂ.ಎ.ಖಾಸಿಂ ಮುಸ್ಲಿಯಾರ್ ಅವರು ದುವಾಃ ಆಶೀರ್ವಚನಾ ನೀಡುವ ಮೂಲಕ ಇಂದು ಸಂಜೆ ಉದ್ಘಾಟಿಸಿದರು.

ಪಳ್ಳಿಕ್ಕರ ಖಾಝಿ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಪೈವಳಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಶೈಖುನಾ ಚಪ್ಪರಪಡವು ಉಸ್ತಾದ್  ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇರಿಕ್ಕೂರು ರಹ್ಮಾನಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಸಲೀಂ ಫೈಝಿ ಇರ್ಫಾನಿ ಅಲ್ ಅರ್ಹರಿ ಮುಖ್ಯ ಪ್ರಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಜಾಮಿಯ್ಯ ಇರ್ಫಾನಿಯ್ಯ ಉತ್ತರ ವಲಯದ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಜಲಾಲಿಯ ಹಿಫುಲುಲ್ ಕುರ್‌ಆನ್ ಕಾಲೇಜಿನ ಸಂಸ್ಥಾಪಕ ಅಬ್ದುಲ್ ರಝಾಕ್ ಮಿಸ್ಬಾಹಿ, ಚಪ್ಪಾರಪಡವು ಜಾಮಿಯ್ಯ ಇರ್ಫಾನಿಯ್ಯದ ಪ್ರಾಧ್ಯಾಪಕ ಶರೀಫ್ ಫೈಝಿ ಇರ್ಫಾನಿ, ಅಬ್ದುಲ್ಲ ಕುಂಞಿ ಫೈಝಿ ಇರ್ಫಾನಿ, ಮುಹಮ್ಮದ್ ಅಲಿ ಫೈಝಿ ಇರ್ಫಾನಿ, ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ಅಬ್ದುನ್ನಾಸರ್ ಸಖಾಫಿ ವಯನಾಡ್, ಉಸ್ಮಾನುಲ್ ಫೈಝಿ ತೋಡಾರು, ಫರಂಗಿಪೇಟೆ ಖತೀಬ್ ಅಬ್ಬಾಸ್ ದಾರಿಮಿ, ಶೇಖ್ ಮುಹಮ್ಮದ್ ಇರ್ಫಾನಿ, ಮಮ್ಮುಂಞಿ ಫೈಝಿ ಮಂಜೇಶ್ವರ, ಶರೀಫ್ ಅಶ್ರಫಿ ಕಲ್ಲೇಗ, ಉಮರ್ ಫೈಝಿ ಸಾಲ್ಮರ, ಮಜೀದ್ ಫರಂಗಿಪೇಟೆ, ಎಲ್.ಟಿ. ಹಸೈನಾರ್ ಪುತ್ತೂರು, ಅಬ್ದುಲ್ ಖಾದರ್ ಉಪ್ಪಳ, ಉಮರ್ ರಾಜಾವ್ ಬಂದೋಡ್, ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಬಾವ ಮತ್ತಿತರರು ಇದ್ದರು.

ಅಮ್ಮೆಮ್ಮಾರ್ ಮಸೀದಿಯ ಖತೀಬ್ ಅಬೂಸ್ವಾಲೀಹ್ ಫೈಝಿ ಸ್ವಾಗತಿಸಿದರು. ಅಬೂಬಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಕೂರ್ನಡ್ಕ ಪ್ರಸ್ತಾವಿಸಿದರು. ಉಮರ್ ದಾರಿಮಿ ಸಾಲ್ಮರ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News