ತಾಜ್‌ಮಹಲ್ ಬಳಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ: ಅನುಮತಿ ನೀಡಲು ಸುಪ್ರೀಂ ನಿರಾಕರಣೆ

Update: 2017-11-20 15:21 GMT

ಹೊಸದಿಲ್ಲಿ, ನ. 20: ತಾಜ್ ಮಹಲ್ ಸಮೀಪ ಬಹುಮಹಡಿಯ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಸೋಮವಾರ ಅನುಮತಿ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಪ್ರವಾಸಿಗಳು ಸ್ಮಾರಕಕ್ಕೆ ವಾಹನದಲ್ಲಿ ಹೋಗುವ ಬದಲು ನಡೆದುಕೊಂಡು ಹೋಗಲು ಸಾಧ್ಯವಾಗಬೇಕು ಎಂದು ಅಭಿಪ್ರಾಯಿಸಿದೆ.

ಮೊಗಲ್ ಸಮಾಧಿಯ ಸುತ್ತಮುತ್ತ ಇರುವ ಪಾರ್ಕಿಂಗ್ ಪ್ರದೇಶವನ್ನು ಧ್ವಂಸಗೊಳಿಸುವಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 24ರಂದು ಆದೇಶಿಸಿತ್ತು. ಅನಂತರ ತಾಜ್‌ಮಹಲ್ ಸಮೀಪದ ಪಾರ್ಕಿಂಗ್ ಪ್ರದೇಶವನ್ನು ಧ್ವಂಸಗೊಳಿಸುವ ತನ್ನ ಆದೇಶಕ್ಕೆ ತಡೆ ನೀಡಿತ್ತು.

ಚಾರಿತ್ರಿಕ ಸ್ಮಾರಕದ ಸಮೀಪ ಖಾಸಗಿಯವರು ನಿರ್ಮಿಸಿದ ಅನಧಿಕೃತ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News