ಪಶ್ಚಿಮ ಘಟ್ಟಗಳ ಜೀವವೈವಿಧ್ಯ ಅಪಾಯದಲ್ಲಿದೆ: ವರದಿ

Update: 2017-11-20 15:23 GMT

ಕೊಚ್ಚಿ,ನ.20: ಅರಣ್ಯ ನಾಶ,ಅತಿಕ್ರಮಣ ಮತ್ತು ಪರಿವರ್ತನೆಗಳಿಂದಾಗಿ ಭಾರತದ ಪಶ್ಚಿಮ ಘಟ್ಟಗಳಲ್ಲಿ ಜೀವವೈವಿಧ್ಯಕ್ಕೆ ಬೆದರಿಕೆ ಎದುರಾಗಿದೆ ಎಂದು ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್(ಐಯುಸಿಎನ್) ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ಇತ್ತೀಚಿಗೆ ಜರ್ಮನಿಯ ಬಾನ್‌ನಲ್ಲಿ ವಿಶ್ವಸಂಸ್ಥೆ ವಾತಾವರಣ ಬದಲಾವಣೆ ಸಮ್ಮೇಳನದಲ್ಲಿ ಬಿಡುಗಡೆಗೊಂಡ ವರದಿಯು, ಪಶ್ಚಿಮ ಘಟ್ಟಗಳಲ್ಲಿ ಮಾನವ ಜನಸಂಖ್ಯೆಯಿಂದ ಉಂಟಾಗುತ್ತಿರುವ ಒತ್ತಡವು ವಿಶ್ವದ ಇತರ ಭಾಗಗಳಲ್ಲಿ ಬಹಳಷ್ಟು ಸಂರಕ್ಷಿತ ಪ್ರದೇಶಗಳು ಎದುರಿಸುತ್ತಿರುವ ಒತ್ತಡಗಳಿಗಿಂತ ಹೆಚ್ಚಾಗಿದೆ ಎಂದು ಹೇಳಿದೆ.

 ಇದೇ ಮೊದಲ ಬಾರಿಗೆ ಎಲ್ಲ 241 ನೈಸರ್ಗಿಕ ವಿಶ್ವ ಪರಂಪರೆ ತಾಣಗಳ ಸಂರಕ್ಷಣೆ ಸಾಧ್ಯತೆಗಳಲ್ಲಿ ಬದಲಾವಣೆಗಳ ಮೌಲ್ಯಮಾಪನವನ್ನು ನಡೆಸಿರುವ ನೂತನ ವರದಿ ‘ಐಸಿಯುಎನ್ ವರ್ಲ್ಡ್ ಹೆರಿಟೇಜ್ ಔಟ್‌ಲುಕ್ 2’ ವಾತಾವರಣ ಬದಲಾವಣೆಯು ಈಗಾಗಲೇ ಒತ್ತಡದಲ್ಲಿರುವ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಪಶ್ಚಿಮ ಘಟ್ಟಗಳ ಪ್ರಭಾವವಿರುವ ಡೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಪ್ರಕ್ರಿಯೆಯ ಮೇಲೆ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ ಎಂದು ಹೇಳಿದೆ.

ಪಶ್ಚಿಮ ಘಟ್ಟದಲ್ಲಿಯ ಪ್ರತ್ಯೇಕ ವ್ಯವಸ್ಥಾಪನೆಯ 39 ತಾಣಗಳ ಜಾಲವನ್ನು ವಿಶ್ವ ಪರಂಪರೆ ತಾಣವೆಂದು ಯುನೆಸ್ಕೋ 2012ರಲ್ಲಿ ಗುರುತಿಸಿತ್ತು.

ಅಭಿವೃದ್ಧಿಯ ನೆಪದಲ್ಲಿ ಒತ್ತಡವು ಪಶ್ಚಿಮ ಘಟ್ಟಗಳಿಗೆ ಹೆಚ್ಚಿನ ಬೆದರಿಕೆಯನ್ನು ಮುಂದುವರಿಸಿದೆ ಎಂದೂ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News