×
Ad

ನ. 21ರಿಂದ ಮಂಜನಾಡಿಯಲ್ಲಿ 'ಹಬ್ಬುರಸೂಲ್ ಕಾನ್ಫರೆನ್ಸ್'

Update: 2017-11-20 21:02 IST

ಉಳ್ಳಾಲ, ನ. 20: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರ ಜನ್ಮದಿನದ ಸವಿನೆನಪಿನಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರ ಮಂಜನಾಡಿಯಲ್ಲಿರುವ ಅಲ್ ಮದೀನಾ ಯತೀಂಖಾನಾ ವತಿಯಿಂದ ನ.21ರಿಂದ ಮೂರು ದಿನಗಳ ಕಾಲ ಬೃಹತ್ ಹಬ್ಬುರಸೂಲ್ ಕಾನ್ಫರೆನ್ಸ್ ಮಂಜನಾಡಿ ಅಲದ ಮದೀನಾ ವಠಾರದಲ್ಲಿ ನಡೆಯಲಿದೆ ಎಂದು  ಕೆ.ಎಂ.ಕೆ ಮಂಜನಾಡಿ ತಿಳಿಸಿದ್ದಾರೆ.

ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಅಲ್ ಮದೀನಾ ಮುಖ್ಯಸ್ಥ  ಅಬ್ಬಾಸ್ ಉಸ್ತಾದ್  ನೇತೃತ್ವದಲ್ಲಿ  ಕಾನ್ಫರೆನ್ಸ್ ನಡೆಯಲಿದೆ ಎಂದರು.

ನ.21 ರಂದು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವದಲ್ಲಿ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ದಾರುಲ್ ಇರ್ಷಾದ್ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಫಿ ಸಅದಿ ಬೆಂಗಳೂರು, ಮುನೀರ್ ಸಖಾಫಿ ಅಲ್ ಮದೀನಾ ಇವರ ಉಪಸ್ಥಿತಿಯಲ್ಲಿ ವಾರ್ಷಿಕ ಮಜ್ಲಿಸ್ ನಡೆಯಲಿದೆ. ನ.22 ರಂದು ಸಯ್ಯಿದ್ ಅಶ್ರಫ್ ತಂಙಳ್ ಆದೂರ್ ಇವರ ನೇತೃತ್ವದಲ್ಲಿ ಮೌಲಿದ್ ಹಾಗೂ ಹಾಫಿಲ್ ಸ್ವಾದಿಕ್ ಅಲಿ ಫಾಳಿಲಿ ಗೊಡಲ್ಲೂರು ಉಪಸ್ಥಿತಿಯಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.

ನ.23 ರಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಇವರ ನೇತೃತ್ವದಲ್ಲಿ ಅಸ್ಸಯ್ಯದ್ ಯಾಸೀನ್ ತಂಞಳ್ ಕೆದಂಬಾಡಿ ಉಪಸ್ಥಿತಿಯಲ್ಲಿ ಸ್ವಲಾತ್ ಮಜ್ಲಿಸಿ ಹಾಗೂ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರು ಮದ್ ಹುರ್ರಸೂಲ್ ಪ್ರಭಾಷಣ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜೀವ ಗಾಂಧಿ ವಿ.ವಿ.ಯ ಸದಸ್ಯ ಡಾ.ಇಫ್ತಿಕಾರ್, ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕೃಷಿಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಎನ್.ಎಸ್.ಕರೀಂ, ಅಲ್ ಮದೀನಾ ಪ್ರಬಂಧಕ ಅಬ್ದುಲ್ ಖಾದರ್ ಸಖಾಫಿ ಮೊದಲಾದ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬದ್ರುಲ್ ಮುನೀರ್ ಹಿಮಮಿ, ಮುಹಮ್ಮದ್ ಕುಂಞಿ ಅಮ್ಜದಿ, ಪುತ್ತುಬಾವ ಮೋರ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News