ಇಂಗ್ಲೆಂಡ್‌ಗೆ ತೆರಳಲು ಕಾರ್ತಿ ಚಿದಂಬರಂಗೆ ಸುಪ್ರೀಂ ಅನುಮತಿ

Update: 2017-11-20 16:18 GMT

ಹೊಸದಿಲ್ಲಿ, ನ. 20: ಇಂಗ್ಲೆಂಡ್‌ನ ವಿಶ್ವವಿದ್ಯಾನಿಲಯದಲ್ಲಿ ಪುತ್ರಿಯನ್ನು ದಾಖಲಿಸಲು ಡಿಸೆಂಬರ್ 1ರಿಂದ 10ರ ವರೆಗೆ ಇಂಗ್ಲೆಂಡ್‌ಗೆ ಭೇಟಿ ನೀಡಲು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂಗೆ ಸುಪ್ರೀಂ ಕೋರ್ಟ್ ಸೋಮವಾರ ಶರತ್ತುಬದ್ದ ಅನುಮತಿ ನೀಡಿದೆ.

ತಾನು ಸಮಯಾವಧಿಗೆ ಬದ್ದನಾಗಿರುವೆ ಹಾಗೂ ಅವಧಿ ಮುಗಿಯುವ ಮುನ್ನ ಭಾರತಕ್ಕೆ ಮರಳಲಿದ್ದೇನೆ ಎಂದು ಭರವಸೆ ನೀಡುವ ಮುಚ್ಚಳಿಕೆಯನ್ನು ತನ್ನ ಮುಂದೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ. ಎ.ಎಂ. ಖಾನ್ವಿಲ್ಕರ್ ಹಾಗೂ ಡಿ. ಚಂದ್ರಚೂಡ ಅವರನ್ನೊಳಗೊಂಡ ಪೀಠ ಕಾರ್ತಿ ಚಿದಂಬರಂಗೆ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News