ಕೆಆರ್‌ಐಡಿಎಲ್ ಅನುದಾನ ಅಕ್ರಮ ತನಿಖೆಗೆ ಸಮಿತಿ ರಚನೆ: ಕೋಟಾ ಆರೋಪಕ್ಕೆ ಸಚಿವ ಎಚ್‌ಕೆ ಪಾಟೀಲ್ ಸ್ಪಷ್ಟನೆ

Update: 2017-11-20 16:50 GMT

ಉಡುಪಿ, ನ.20: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮದ ಅನುದಾನದ ಸಮರ್ಪಕ ಬಳಕೆಯಲ್ಲಿ ಇಲಾಖೆ ವಿಫಲವಾಗಿರುವುದು ಹಾಗೂ ಇಲಾಖೆಯ ಅನುದಾನದ ಅಕ್ರಮ ಠೇವಣಿ ಮತ್ತು ವರ್ಗಾವಣೆ ಆರೋಪದ ಕುರಿತು ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರು ವಿಧಾನಪರಿಷನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ಲಿಖಿತ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ಕೆಆರ್‌ಐಡಿಎಲ್ ಸಂಸ್ಥೆಯು ವಿವಿಧ ಇಲಾಖೆಗಳು ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಸಲಾ ಗುತ್ತಿದೆ. ಸಂಸ್ಥೆಯು ಕಾಲಕಾಲಕ್ಕೆ ಅನುದಾನವನ್ನು ಬಳಸಿಕೊಂಡು ಕಾಮಗಾರಿ ಗಳನ್ನು ನಿರ್ವಹಿಸುತ್ತಾ ಬಂದಿದೆ. ಅನುದಾನ ಬಳಕೆಯಲ್ಲಿ ಸಂಸ್ಥೆ ವಿಫಲವಾಗಿಲ್ಲ. ಹಾಗೂ ವಿವಿಧ ಇಲಾಖೆಗಳಿಂದ ಸಂಸ್ಥೆಗೆ ವಹಿಸಿದ ಕಾಮಗಾರಿಗಳಿಗೆ ಬಿಡುಗಡೆ ಯಾದ ಅನುದಾನದಲ್ಲಿ ಯಾವುದೇ ಸ್ಥಿರ ಠೇವಣಿ ಮಾಡಿರುವುದಿಲ್ಲ. ಸಂಸ್ಥೆಯು ಗಳಿಸಿರುವ ಕ್ರೋಢಿಕೃತ ಲಾಭಾಂಶವನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಇಡಲಾಗುತ್ತದೆಎಂಬ ಮಾಹಿತಿ ನೀಡಿದರು.

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಡಿಯಲ್ಲಿ ಬರುವ ಕೆಆರ್‌ಐಡಿಎಲ್ ಸಂಸ್ಥೆ ಅಕ್ಟೋಬರ್ ತಿಂಗಳ ಅಂತ್ಯಕ್ಕೆ 740 ಕೋಟಿಗಳ 23 ಠೇವಣಿಗಳನ್ನು 8 ವಿವಿಧ ಬ್ಯಾಂಕುಗಳಲ್ಲಿ ಒಂದು ವರ್ಷದ ಅವಧಿಗೆ ಠೇವಣಿ ಇಡಲಾಗಿದೆ. ಕೆಆರ್‌ಐಡಿಎಲ್ ಅನುದಾನದ ಸ್ಥಿರ ಠೇವಣಿಗೆ ಸಂಬಂಧಿಸಿದಂತೆ, ನಿಯಮಾವಳಿ ಉಲ್ಲಂಘಿಸಿ ಅಕ್ರಮವೆಸಗಿರುವ ಬಗ್ಗೆ ಪ್ರಶ್ನಿಸಿದ ಶಾಸಕ ಪೂಜಾರಿಗೆ, ಇಂಡಿಯನ್‌ಓವರ್ ಸೀಸ್ ಬ್ಯಾಂಕ್ ಮಂಗಳೂರು ಕುಳಾಯಿ ಶಾಖೆಯಲ್ಲಿ 55 ಕೋಟಿ ರೂ. ಸ್ಥಿರ ಠೇವಣಿ ಇರಿಸಿ ದುರುಪಯೋಗ ವಾಗಲು ಕಾರಣವಾದ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಡಾ. ವೀರ ಗೌಡ ಪಾಟೀಲ್, ಉಪ ಹಣಕಾಸು ಅಧಿಕಾರಿ ಪ್ರಶಾಂತ್‌ಕುಮಾರ್ ಎಂ.ವಿ, ಲೆಕ್ಕಪತ್ರಅಧೀಕ್ಷಕ ಶಂಕರಚಾರಿ ಇವರನ್ನು ಅಮಾನತು ಮಾಡಲಾಗಿದೆ ಎಂದರು.

ಅಕ್ರಮ ಠೇವಣಿಗಳ ಸಂಬಂಧ ಕೇಂದ್ರೀಯ ಮುಖ್ಯಅಭಿಯಂತರರು ಹಾಗೂ ಉತ್ತರ ಮುಖ್ಯಅಭಿಯಂತರರ ಅಧ್ಯಕ್ಷತೆಯಲ್ಲಿ 2 ಉಪಸಮಿತಿಗಳನ್ನು ರಚಿಸಲಾಗಿದ್ದು, ಅವ್ಯವಹಾರದ ಕುರಿತು ಸೂಕ್ತ ತನಿಖೆ ಮಾಡಲು ಮತ್ತು ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ ಎಂದು ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಪತ್ರಿಕೆಗಳಿಗೆ ಬಿಡುಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಕ್ರಮ ಠೇವಣಿಗಳ ಸಂಬಂಕೇಂದ್ರೀಯಮುಖ್ಯಅಭಿಯಂತರರುಹಾಗೂಉತ್ತರಮುಖ್ಯಅಭಿಯಂತರರಅ್ಯಕ್ಷತೆಯಲ್ಲಿ 2 ಉಪಸಮಿತಿಗಳನ್ನು ರಚಿಸಲಾಗಿದ್ದು, ಅವ್ಯವಹಾರದ ಕುರಿತು ಸೂಕ್ತ ತನಿಖೆ ಮಾಡಲು ಮತ್ತು ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ ಎಂದು ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News