ನಾಗರಿಕರ ಮೇಲೆ ದಾಳಿ ನಿಲ್ಲಿಸಿ:ಸಿರಿಯ ಪಕ್ಷಗಳಿಗೆ ವಿಶ್ವಸಂಸ್ಥೆ ಕರೆ

Update: 2017-11-20 16:50 GMT

ಡಮಾಸ್ಕಸ್ (ಸಿರಿಯ), ನ. 20: ರಾಜಧಾನಿ ಡಮಾಸ್ಕಸ್ ಮತ್ತು ಅದರ ಉಪನಗರಗಳಲ್ಲಿ ನಾಗರಿಕರ ಮೇಲೆ ದಾಳಿ ನಡೆಸದಂತೆ ಸಿರಿಯದ ಯುದ್ಧನಿರತ ಬಣಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರಂತರ ಬಾಂಬ್ ದಾಳಿಗಳಲ್ಲಿ ಡಝನ್‌ಗಟ್ಟಲೆ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ನಿಲ್ಲಿಸುವಂತೆ ಸಿರಿಯದಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ಮತ್ತು ಅಭಿವೃದ್ಧಿ ವ್ಯವಹಾರಗಳ ಸಮನ್ವಯಕಾರ ಅಲಿ ಅಲ್-ಝಾಟರಿ ಎಲ್ಲ ಪಕ್ಷಗಳಿಗೆ ರವಿವಾರ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News