ಕೌಡೂರಿನಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ

Update: 2017-11-20 16:54 GMT

ಉಡುಪಿ, ನ.20: ಭಾರತದ ಧರ್ಮ-ಸಂಸ್ಕೃತಿಯು ಕೃಷಿಯ ಮೇಲೆ ನಿಂತಿದೆ. ವೈಜ್ಞಾನಿಕ ಮತ್ತು ತಜ್ಞ ಕೃಷಿಕರ ಸಹಕಾರ ಪಡೆದು ಆಸಕ್ತಿಯಿಂದ ಮುನ್ನಡೆದರೆ ಉತ್ತಮ ಲಾಭ ತರಬಲ್ಲ ಉದ್ಯಮಗಳ ಅವಕಾಶಗಳನ್ನು ಕೃಷಿ ಕ್ಷೇತ್ರ ನೀಡ ಬಲ್ಲದು ಎಂದು ಕೌಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೆ. ವಿಶ್ವನಾಥ ಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘ, ಉಡುಪಿ, ಶ್ರೀಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ, ಕೌಡೂರು ಹಾಲು ಉತ್ಪಾದಕರ ಸಹಕಾರಿ ಸಂಘ ರಂಗನಪಲ್ಕೆ, ಸ್ತ್ರೀಶಕ್ತಿ ಸಂಘ ಕೌಡೂರು ಸಂಯುಕ್ತವಾಗಿ ಕೌಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದ ಆಧ್ಯಕ ್ಷತೆ ವಹಿಸಿ ಅವರು ಮಾತನಾಡಿದರು.

 ಕೌಡೂರು ಪ್ರಗತಿಪರ ಕೃಷಿಕ ಹರೀಶ್ ಶೆಟ್ಟಿ ಉದ್ಘಾಟಿಸಿದ ಕಾಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಯ ಭೋಜ ಶೆಟ್ಟಿ, ಗೀರಥ ಭಟ್, ಬಿಂದು ಮಾಧವ ಭಟ್ ಕೌಡೂರು, ರಂಗನಪಲ್ಕೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸಂದೀಪ ಶೆಟ್ಟಿ ್ಟಸ್ತ್ರೀಶಕ್ತಿ ಸಂಘ ಕೌಡೂರು ಅಧ್ಯಕ್ಷೆ ಸುಲೋಚನ ವಿ. ಶೆಟ್ಟಿ ಭಾಗವಹಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ್ ಟ್ ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ವಿವಿಧ ರೀತಿಯ ಬೆಳೆಗಳ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಹಾಗೂ ಸಮಗ್ರ ಕೃಷಿ ಮಾಡುವ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು.

ಕೌಡೂರು ಅಂಗನವಾಡಿಯ ಗೀತಾ ಭಂಡಾರಿ ಸ್ವಾಗತಿಸಿದರು. ಶ್ಯಾಮಲಾ ಟ್ ವಂದಿಸಿದರು. ಜಾರ್ಜ್ ಡೇಸಾ ರಂಗನಪಲ್ಕೆ ಕಾರ್ಯಕ್ರಮ ನಿರ್ಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News