'ಕೊಂಕಣಿ ತೋಂಡಿ ಸಾಹಿತ್ಯ ಇಂದಿಗೂ ಪ್ರಸ್ತುತ'

Update: 2017-11-20 16:56 GMT

ಮಂಗಳೂರು, ನ. 20: ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ವಿಭಾಗವು ಇತ್ತೀಚೆೆಗೆ ಕೊಂಕಣಿ ತೋಂಡಿ ಸಾಹಿತ್ಯವೆನ್ನುವ ವಿಷಯದಲ್ಲಿ ಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ್, ಕೊಂಕಣಿಯಲ್ಲಿ ಪ್ರಾಚೀನ ಕಾಲದಿಂದ ಹಿರಿಯರು ಮದುವೆ ಸಹಿತ ಮನೆಯ ಇತರ ಶುಭ ಕಾರ್ಯಗಳಲ್ಲಿ ವೋವಿಯೊ ಹಾಡುಗಳನ್ನು ಹಾಡಿ ಆ ಸಾಹಿತ್ಯವನ್ನು ಜೀವಂತವಾಗಿರಿಕೊಂಡಿದ್ದಾರೆ. ಆಧುನಿಕ ಯುಗದಲ್ಲೂ ತೋಂಡಿ ಸಾಹಿತ್ಯಕ್ಕೆ ಮಹತ್ವವಿದೆ ಎನ್ನುವದಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದೇ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಚಂದ್ರಿಕಾ ಮಲ್ಯ, ಮರೋಳಿ ಸಬಿತಾ ಕಾಮತ, ಮಾಲತಿ ಕಾಮತ್ ನೆರವೇರಿಸಿದರು. ಕೊಂಕಣಿ ಲೋಕಕಥೆ, ಹೊಡೆಮಾಲೆ ಕಾಣಿಯೊ, ಶಿಶುಗೀತ, ಹುಮ್ಮಣಿ, ಗಾದಿಯೋಂ ಈ ಮುಂತಾದ ಮೌಖಿಕ ಸಾಹಿತ್ಯ ಪರಂಪರೆಯನ್ನು ವಿವರಿಸಿ, ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿದರು.

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಣಿ ಶ್ರೀ ವತ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕ ಡಾ. ಅರವಿಂದ ಶ್ಯಾನಭಾಗ್ ಅವರು ಪ್ರಾಸ್ತಾವಿಕವಾಗಿ ತೋಂಡಿ ಸಾಹಿತ್ಯದ ಆವಶ್ಯಕತೆಯನ್ನು ತಿಳಿಸಿದರು.ಶ್ವೇತಾ ಕೆ. ಸ್ವಾಗತಗೀತೆ ಹಾಡಿದರು. ಪ್ರೇಮ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು. ಮರಿಯಾ ಲೋಬೊ ವಂದಿಸಿದರು.       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News