ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಕ್ತದಾನ ಶಿಬಿರ

Update: 2017-11-20 17:26 GMT

ಬಿ.ಸಿ ರೋಡ್, ನ. 20: ಭಾರತದಲ್ಲಿ ಪ್ರತೀ ವರ್ಷ ಸಾವಿರಾರು ಜನರು ರಕ್ತದ ಅಭವಾದಿಂದ ಮರಣ ಹೊಂದುತ್ತಿದ್ದಾರೆ. ಈ ರಕ್ತದ ಅಭಾವವನ್ನು ನೀಗಿಸಲು ಬೇರೊಂದು ಪರಿಹಾರವಿಲ್ಲದಂತಾಗಿದೆ. ರಕ್ತದ ಅವಶ್ಯಕತೆಯನ್ನು ಪೋರೈಸಲು ರಕ್ತವೇ ಮಾರ್ಗ ಹೊರತು ಕೃತಕ ವಸ್ತುಗಳಿಂದ ಸಾಧ್ಯವಿಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅದ್ಯಕ್ಷರಾದ ಇಜಾರ್ ಅಹ್ಮದ್‌ರವರು ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿ.ಸಿ ರೋಡು ವಲಯ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇವುಗಳ ಸಹಯೋಗದಲ್ಲಿ ತುಂಬೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಭಾರತದಾಧ್ಯಂತ ರಕ್ತದಾನ, ಸ್ಕೂಲ್ ಚಲೋ, ಜನಾರೋಗ್ಯವೇ ರಾಷ್ಟ್ರ ಶಕ್ತಿಗಳಂತಹ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಸಂಘಟನೆಯಾಗಿದೆ. ಆದರೆ ಇಂತಹ ಮಾನವೀಯ ಸೇವೆಗಳನ್ನು ಮಾಡುತ್ತಿರುವ ಸಂಘಟನೆಯನ್ನು ಸರಕಾರ ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿ.ಸಿ ರೋಡು ವಲಯ ಅದ್ಯಕ್ಷರಾದ ಇಮ್ತಿಯಾರ್ ತುಂಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ ಸಿಕಂದರ್ ಪಾಷ, ತುಂಬೆ ಗ್ರಾಮ ಪಂಚಾಯತ್ ಅಬಿವೃಧ್ಧಿ ಅಧಿಕಾರಿ ಚಂದ್ರಾವತಿ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ರಕ್ತ ನಿಧಿ ಅಧಿಕಾರಿ ಡಾ ನಮೃತಾ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ಮುಖ್ಯ ವೈಧ್ಯಾಧಿಕಾರಿ ಡಾ ಕಿರಣ್ ಶೆಟ್ಟಿ, ಮುಹಿಯುದ್ಧೀನ್ ಜುಮಾ ತುಂಬೆ ಇದರ ಅಧ್ಯಕ್ಷ ಅಝೀರ್ ತುಂಬೆ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ತುಂಬೆ, ಅರಫಾ ಗ್ರೂಪ್ಸ್ ತುಂಬೆ ಇದರ ಮಾಲಕ ಸಾವುಂಞ ವಳವೂರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಿಳೆಯರು ಕೂಡಾ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಗಳಾದರು. ಒಟ್ಟು 76 ಯೂನಿಟ್ ರಕ್ತವನ್ನು ಸಮಗ್ರಹಿಸಲಾಯಿತು. 

ಖಾದರ್ ಪರಂಗಿಫೇಟೆ ಸ್ವಾಗತಿಸಿದರು, ರಹಿಮಾನ್ ಮಠ ವಂದಿಸಿದರು ಮತ್ತು ಸುಹಾರ್ ತುಂಬೆ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News