×
Ad

ದ್ವಾರಕಾ ಮೆಟ್ರೋ ಸ್ಟೇಶನ್ ಸಮೀಪ ಶೂಟೌಟ್

Update: 2017-11-21 18:25 IST

ಹೊಸದಿಲ್ಲಿ, ನ.21 : ಮಂಗಳವಾರ ನೈಋತ್ಯ ದಿಲ್ಲಿಯ ದ್ವಾರಕಾ ಮೆಟ್ರೋ ಸ್ಟೇಶನ್ ಸಮೀಪ ನಡೆದ ಶೂಟೌಟ್ ಪ್ರಕರಣದ ನಂತರ ದಿಲ್ಲಿ ಹಾಗೂ ಪಂಜಾಬ್ ಪೊಲೀಸರ ಜಂಟಿ ತಂಡವೊಂದು ಐದು ಜನರನ್ನು ಬಂಧಿಸಿ ಅವರಿಂದ ಭಾರೀ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಪಂಜಾಬ್ ಪೊಲೀಸರು ಈ ಶಂಕಿತರ ವಿರುದ್ಧ ಕಾರ್ಯಾಚರಣೆ ನಡೆಸಲು ದಿಲ್ಲಿ ಪೊಲೀಸರ ಸಹಾಯ ಕೋರಿದ ನಂತರ ಈ ಬಂಧನ ನಡೆದಿದೆ. ಶೂಟೌಟ್ ಜನವಸತಿ ಪ್ರದೇಶದಲ್ಲಿ ನಡೆದಿದ್ದರೂ ಯಾರಿಗೂ ಗಾಯಗಳುಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕನಿಷ್ಠ 13 ಬಂದೂಕುಗಳು ಹಾಗೂ 100 ಕಾಟ್ರಿಡ್ಜ್‌ಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಪಂಜಾಬ್ ಪೊಲೀಸರಿಗೆ ಕೊಲೆ, ಕೊಲೆಯತ್ನ ಹಾಗೂ ಕಾರು ಅಪಹರಣ ಘಟನೆಗಳಿಗೆ ಸಂಬಂಧಿಸಿದಂತೆ ಬೇಕಾಗಿದ್ದರು.

ಮಾರು ವೇಷದಲ್ಲಿದ್ದ ಪೊಲೀಸರು ಶಂಕಿತರಿದ್ದ ಕಟ್ಟಡದತ್ತ ಗುಂಡು ಹಾರಿಸಿದಾಗ ಒಳಗಿನಿಂದಲೂ ಗುಂಡಿನ ಪ್ರತಿ ದಾಳಿ ನಡೆದಿತ್ತು. ಆರೋಪಿಗಳು ಕಟ್ಟಡದ ಎರಡನೇ ಮಹಡಿಯಲ್ಲಿದ್ದರೆ ಉಳಿದ ಮಹಡಿಗಳಲ್ಲಿ ಕಚೇರಿಗಳು ಹಾಗೂ ನಿವಾಸಗಳಿದ್ದವು. ಈ ಕಟ್ಟಡದಲ್ಲಿನ ಅಪಾರ್ಟ್‌ಮೆಂಟ್ ಒಂದನ್ನು ರಿಯಲ್ ಎಸ್ಟೇಟ್ ಡೀಲರ್ ಒಬ್ಬರು ಆರೋಪಿಗಳಿಗೆ ಒದಗಿಸಿದ್ದನೆಂದು ತಿಳಿದು ಬಂದಿದ್ದು ಬಂಧಿತರಿಗೂ ಆತನಿಗೂ ಇರುವ ನಂಟಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶೂಟೌಟ್ ಸಂದರ್ಭ ಒಂದಿಬ್ಬರು ಆರೋಪಿಗಳು ಪರಾರಿಯಾಗಿರುವ ಸಾಧ್ಯತೆಯಿರುವುದರಿಂದ ಪೊಲೀಸರು ಅವರಿಗಾಗಿ ಶೋಧ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News