×
Ad

ಗುಜರಾತ್: ಮುಖ್ಯಮಂತ್ರಿ ರುಪಾನಿ ಆಸ್ತಿಯಲ್ಲಿ 21% ಹೆಚ್ಚಳ

Update: 2017-11-21 18:33 IST

ಅಹ್ಮದಾಬಾದ್, ನ.21: ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಸೋಮವಾರದಂದು ರಾಜ್‌ಕೋಟ್ ಪಶ್ಚಿಮ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ರುಪಾನಿ ತನ್ನ ಆಸ್ತಿಯ ವೌಲ್ಯ ರೂ. 9.09 ಕೋಟಿ ಎಂದು ತಿಳಿಸಿದ್ದಾರೆ. 2014ರಲ್ಲಿ ರುಪಾನಿ ಘೋಷಿಸಿದ್ದ ಆಸ್ತಿಗೆ ಹೋಲಿಸಿದರೆ ಈ ವರ್ಷ ಅವರ ಆಸ್ತಿಯಲ್ಲಿ 21% ಹೆಚ್ಚಳವಾಗಿದೆ.

ರುಪಾನಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನ ಇಂದ್ರನೀಲ್ ರಾಜ್ಯಗುರುರ್ ಸ್ಪರ್ಧಿಸುತ್ತಿದ್ದು ಅವರ ಆಸ್ತಿ ಕೂಡಾ 15% ಏರಿಕೆಯಾಗಿದೆ ಎಂದು ದಾಖಲೆಗಳಿಂದ ತಿಳಿದುಬಂದಿದೆ.

ರಾಜ್‌ಕೋಟ್‌ನ ನೀರಿನ ಪ್ರಮುಖ ಮೂಲವಾಗಿರುವ ಅಜಿ ಅಣೆಕಟ್ಟಿಗೆ ಭೇಟಿ ನೀಡುವ ಮೂಲಕ ತನ್ನ ದಿನವನ್ನು ಆರಂಭಿಸಿದ ರುಪಾನಿ, ಆ ಪ್ರದೇಶದಲ್ಲಿ ನೀರಿನ ಕೊರತೆಯನ್ನು ನೀಗಿಸುವುದಾಗಿ ಒತ್ತಿಹೇಳಿದರು. ಅಲ್ಲಿಂದ ಆಸ್ಪತ್ರೆಯನ್ನು ನಡೆಸುತ್ತಿರುವ ಖಾಸಗಿ ಸಂಸ್ಥೆ ರಂಚೋಡ್ ದಾಸ್ ಆಶ್ರಮಕ್ಕೆ ತೆರಳಿದ ಅವರು ನಂತರ ಪತ್ನಿ ಅಂಜಲಿ ಜೊತೆಗೂಡಿ ದ್ವಿಚಕ್ರ ವಾಹನದಲ್ಲಿ ಸೋನಿ ಬಝಾರ್‌ನಲ್ಲಿರುವ ಜೈನ ದೇವಾಲಯಕ್ಕೆ ಭೇಟಿ ನೀಡಿದರು.

ಸ್ವಾಮಿ ನಾರಾಯಣ ದೇವಸ್ಥಾನ, ಬಾಲಾಜಿ ದೇವಸ್ಥಾನ ಮತ್ತು ಪಂಚನಾಥ್ ಮಹಾದೇವ್ ದೇವಸ್ಥಾನಕ್ಕೂ ಭೇಟಿ ನೀಡಿದ ಮುಖ್ಯಮಂತ್ರಿ ನಂತರ ಬಹುಮಲಿ ಭವನ್ ಸಮೀಪ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.ಇದೇ ವೇಳೆ ರುಪಾನಿ ೞವಿಕಾಸಕ್ಕೆ ತಲೆಕೆಟ್ಟು ಹೋಗಿದೆೞಎಂಬ ಘೋಷವಾಕ್ಯ ಬಳಸಿದ್ದಕ್ಕಾಗಿ ಕಾಂಗ್ರೆಸ್ ಮೇಲೆ ಟೀಕೆಗಳ ಮಳೆಗರೆದರು. ನಾವು ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಈ ಮೂರು ವರ್ಷಗಳಲ್ಲಿ ಅಭಿವೃದ್ಧಿಯ ಸಿದ್ಧಾಂತ ಎಷ್ಟು ತೀವ್ರವಾಗಿದೆಯೆಂದರೆ ಕಾಂಗ್ರೆಸ್‌ನ ಮೂಲವೇ ಬತ್ತಿಹೋಗಿದೆ ಮತ್ತು ಪಕ್ಷವು 20 ಪ್ರಮುಖ ಚುನಾವಣೆಗಳಲ್ಲಿ ಸೋಲುಂಡಿದೆ. ಇದರಿಂದಾಗಿ ಹೆದರಿ ನಡುಗುತ್ತಿರುವ ಕಾಂಗ್ರೆಸ್ ಅಭಿವೃದ್ಧಿಯನ್ನೇ ಗೇಲಿ ಮಾಡಲು ಮುಂದಾಗಿದೆ ಎಂದು ರುಪಾನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News