ಮಂಜನಾಡಿ: ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್
ಉಳ್ಳಾಲ, ನ. 21: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಮಂಜನಾಡಿ ಶಾಖೆ ವತಿಯಿಂದ ಇಲಲ್ ಹಬೀಬ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಸೋಮವಾರ ಮಂಜನಾಡಿ ಜಂಕ್ಷನ್‌ನಲ್ಲಿ ನಡೆಯಿತು.
ಅಬ್ದುಲ್ ಲತೀಫ್ ಸಅದಿ ಪಯಶ್ವಿ ಹುಬ್ಬುರ್ರಸೂಲ್ ಮುಖ್ಯ ಪ್ರಭಾಷಣಗೈದು ಮಾತನಾಡಿ, ಪ್ರವಾದಿ ಮೌಲಿದ್ ಕೀರ್ತನೆಗಳು ಪಾರಾಯಣ ಮಾಡುವುದರಿಂದ ಅದಷ್ಟೋ ರೋಗಗಳು ಗುಣವಾಗಿವೆ. ವಿಶೇಷವಾಗಿ ಪ್ರವಾದಿ ಜನ್ಮ ಮಾಸಗಳಲ್ಲಿ ಮೌಲಿದ್ ಪಾರಾಯಣ ಮಾಡಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಂತಹ ಉದಾಹರಣೆಗಳಿವೆ ಎಂದರು.
ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವ ಸಮೂಹ ಸೋಷಿಯಲ್ ಮೀಡಿಯಾದಲ್ಲಿ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದು ಹೀಗೆ ಮುಂದುವರಿದರೆ ಪ್ರವಾದಿಯ ಸಂದೇಶ ಜಗತ್ತಿನಲ್ಲಿ ನೆಲೆನಿಲ್ಲಲು ಸಾಧ್ಯವಿಲ್ಲ. ಯುವ ಸಮೂಹ ಲೌಕಿಕ ವಿದ್ಯೆ ಜೊತೆಗೆ ಧಾರ್ಮಿಕ ವಿದ್ಯೆ ಮಹತ್ವ ನೀಡಿ ಇಸ್ಲಾಂ ಧರ್ಮವನ್ನು ಅರ್ಥೈಸಿಕೊಂಡು ಅದರಂತೆ ಜೀವನದಲ್ಲಿ ಮುಂದುವರಿಯಬೇಕಾಗಿದೆ ಎಂದರು.
ದ.ಕ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಹಾಜಿ ಎನ್.ಎಸ್ ಕರೀಂ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ, ಎಸ್‌ವೈಎಸ್ ಕೊಲ್ಲರಕೋಡಿ ಅಧ್ಯಕ್ಷ ಎನ್.ಎಂ ಅಬ್ದುರ್ರಹ್ಮಾನ್ ಹಾಜಿ, ಎಸ್ಸೆಸ್ಸೆಫ್ ದ.ಕ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಕೆ.ಎಂ.ಕೆ ಮಂಜನಾಡಿ, ಮಂಜನಾಡಿ ಗ್ರಾ.ಪಂ ಸದಸ್ಯ ಕುಂಞಬಾವ ಹಾಜಿ ಕಲ್ಕಟ್ಟ, ನರಿಂಗಾನ ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಕುಂಞ, ಎಸ್‌ವೈಎಸ್ ಮಂಜನಾಡಿ ಶಾಖಾಧ್ಯಕ್ಷ ಹುಸೈನ್ ಕುಂಞ, ಮಂಜನಾಡಿ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಲಿ ಕುಂಞ ಪಾರೆ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಲಿಕೆ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಜೊತೆ ಕಾರ್ಯದರ್ಶಿ ಕುಬೈಬುಲ್ಲಾ ತಂಙಳ್, ಪ್ರ.ಕಾರ್ಯದರ್ಶಿ ಶರೀಫ್ ಮುಡಿಪು, ಅನ್ಸಾರ್ ನಗರ ಮದರಸ ಸದರ್ ಮುಹಲ್ಲಿಂ ಫಾರೂಖ್ ಸಖಾಫಿ, ಮಂಗಳಾಂತಿ ಮದರಸ ಮುಹಲ್ಲಿಂ ಹುಸೈನ್ ಮುಸ್ಲಿಯಾರ್, ಮಂಗಳಾಂತಿ ಮದರಸ ಸಮಿತಿ ಕಾರ್ಯದರ್ಶಿ ಮುನೀರ್ ಬಸರ, ಎಸ್‌ವೈಎಸ್ ಮಂಜನಾಡಿ ಸೆಂಟರ್ ಅಧ್ಯಕ್ಷ ಮಹಮೂದ್ ಹಾಜಿ ಕಂಡಿಕ, ಎಸ್ಸೆಸ್ಸೆಫ್ ಕಲ್ಕಟ್ಟ ಶಾಖಾಧ್ಯಕ್ಷ ಕೆ.ಎಂ ಶರೀಫ್ ಕಲ್ಕಟ್ಟ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಎಸ್ಸೆಸ್ಸೆಫ್ ಮಂಜನಾಡಿ ಅಧ್ಯಕ್ಷ ಇಬ್ರಾಹೀಂ ಅಹ್ಸನಿ ಸ್ವಾಗತಿಸಿದರು. ಕಾರ್ಯದರ್ಶಿ ಮಜೀದ್ ವಂದಿಸಿದರು.