ನ.24 ರಂದು ವೇಣೂರು ಕ್ರಿಸ್ತರಾಜ ದೇವಾಲಯದ ಉದ್ಘಾಟನೆ
ಬೆಳ್ತಂಗಡಿ, ನ. 21: ವೇಣೂರು ಕರಿಮಣೇಲಿನಲ್ಲಿರುವ ಕ್ರಿಸ್ತರಾಜ ದೇವಾಲಯದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು ದೇವಾಲಯದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮಗಳು ನ.24 ರಂದು ನಡೆಯಲಿದೆ ಎಂದು ಎಂದು ಧರ್ಮಗುರುಗಳಾದ ಫಾ. ಆಂಟನಿ ಡಿಸೋಜ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿಚಾರ ತಿಳಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಇದ್ದ ವೇಣೂರು ಕ್ರಿಸ್ತರಾಜ ದೇವಾಲಯ 1937 ರಲ್ಲಿ ನಿರ್ಮಾಣ ಗೊಂಡಿತ್ತು, ಎಂಬತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಬದಲ್ಲಿ ದೇವಾಲಯದ ನವೀಕರಣ ಕಾರ್ಯ ಮಾಡಲಾಗಿದ್ದು ಸುಮಾರು ಒಂದುವರೆ ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಇಲ್ಲಿ ಸುಮಾರು 200 ಕ್ರೈಸ್ಥಕುಟುಂಬಗಳಿದ್ದು 900 ಮಂದಿ ಸಮಾಜಬಾಂಧವರಿಗೆ ಸೇವೆಯನ್ನು ನೀಡುತ್ತಿದೆ ಎಂದರು.
ನ 24 ರಂದು ಮಂಗಳೂರಿನ ಧರ್ಮಾಧ್ಯಕ್ಷರಾದ ಅ.ವಂ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಆಶೀರ್ವಚನ ವಿಶಿಗಳನ್ನು ನೆರವೇರಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ.ವಂ ಲಾರೆನ್ಸ್ ಮುಕ್ಕುಯಿ, ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಧ ರೈ, ಸಂಸದರಾದ ನಳಿನ್‌ಕುಮಾರ್ ಕಟೀಲು, ಬೆಳ್ತಂಗಡಿ ಶಾಸಕರಾದ ಕೆ ವಸಂತಬಂಗೇರ, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್‌ಡಿಸೋಜ, ಶಾಸಕರಾದ ಅಭಯಚಂದ್ರ ಜೈನ್, ಪ್ರತಾಪಚಂದ್ರಶೆಟ್ಟಿ, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್‌ಜನರಲ್ ಡೆನ್ನಿಸ್ ಮೋರಾಸ್, ಬೆಳ್ತಂಗಡಿ ವಲಯದ ಪ್ರಧಾನ ಗುರುಗಳಾದ ಬೊನವೆಂಜರ್‌ನಜರೆತ್, ಜಿಲ್ಲಾಪಂಚಾಯತು ಸದಸ್ಯ ಪಿಧರಣೇಂದ್ರಕುಮಾರ್, ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಲ್,ಜೆ ಫೆರ್ನಾಂಡಿಸ್ ಹಾಗೂ ಅನೂಪ್ ಜೆ ಪಯಸ್ ಪೂರಕ ಮಾಹಿತಿ ನೀಡಿದರು. ಗೋಷ್ಟಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೊನಾಲ್ಡ್ ಡಿಸೋಜ, ವೇಣೂರು ಗ್ರಾ. ಪಂ ಉಧ್ಯಕ್ಷ ಅರುಣ್ ಕ್ರಾಸ್ತಾ, ಪಾಲನಾಮಂಡಳಿಯ ಕಾರ್ಯದರ್ಶಿಸ್ಟೀವನ್‌ಡಿಕುನ್ನಾ, ಉಪಸ್ಥಿತರಿದ್ದರು.