×
Ad

ಗೋಲ್ಡ್ ಪ್ಯಾಲೇಸ್-ಸಾರಿ ಪ್ಯಾಲೇಸ್‌ನಲ್ಲಿ ಲಕ್ಕಿ ಕೂಪನ್ ಡ್ರಾ

Update: 2017-11-21 20:03 IST

ಮಂಗಳೂರು, ನ.21: ಗೋಲ್ಡ್ ಆ್ಯಂಡ್ ಡೈಮಂಡ್ ಪ್ಯಾಲೇಸ್ ಮತ್ತು ಸಾರಿ ಪ್ಯಾಲೇಸ್‌ನ ಮಂಗಳೂರು ಹಾಗೂ ಕಾಸರಗೋಡು ಮಳಿಗೆಯ ವತಿಯಿಂದ ಆಯೋಜಿಸಲಾದ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮವು ನಗರದ ಕೆ.ಎಸ್.ರಾವ್ ರಸ್ತೆಯ ಮಳಿಗೆಯಲ್ಲಿ ಮಂಗಳವಾರ ನಡೆಯಿತು.

ಮಳಿಗೆಯ ಗ್ರಾಹಕರಿಗಾಗಿ ‘ಶಾಪ್ ಆ್ಯಂಡ್ ವಿನ್’ ಯೋಜನೆಯಡಿ ಏರ್ಪಡಿಸಲಾದ ಈ ಲಕ್ಕಿ ಕೂಪನ್‌ನ ಡ್ರಾವನ್ನು ಮಂಗಳೂರು ನಗರ ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್ ನಡೆಸಿಕೊಟ್ಟರು. ಉಡುಪಿ ಜಿಲ್ಲೆಯ ಮಣಿಪುರದ ಅಬ್ದುಲ್ ಸಮೀರ್ ‘ಹುಂಡೈ ಇಯೋನ್ 2017’ ಕಾರನ್ನು ತನ್ನದಾಗಿಸಿಕೊಂಡರು.

ಈ ಸಂದರ್ಭ ಗೋಲ್ಡ್ ಆ್ಯಂಡ್ ಡೈಮಂಡ್ ಪ್ಯಾಲೇಸ್ ಮತ್ತು ಸಾರಿ ಪ್ಯಾಲೇಸ್‌ನ ಪಾಲುದಾರರಾದ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಸೂಫಿ, ಅನ್ವರ್ ಹುಸೈನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News