×
Ad

ಕಿನ್ಯ-ಬೋಳಿಯಾರ್: ಸರಕಾರಿ ಬಸ್ ಪುನರಾರಂಭ

Update: 2017-11-21 20:07 IST

ಮಂಗಳೂರು, ನ.21: ಸ್ಟೇಟ್‌ಬ್ಯಾಂಕ್‌ನಿಂದ ಕಿನ್ಯ ಮತ್ತು ಬೋಳಿಯಾರ್ ರೂಟ್‌ನಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ಮಂಗಳವಾರದಿಂದ ಪುನರಾರಂಭಗೊಂಡಿದೆ.

ಸಾರ್ವಜನಿಕರ ಬೇಡಿಕೆಯ ಮೇರೆಗೆ ಈ ರೂಟ್‌ನಲ್ಲಿ ಅ.18ರಂದು ಸರಕಾರಿ ಬಸ್ ಓಡಾಟ ಆರಂಭಿಸಿತ್ತು. ಆದರೆ ಖಾಸಗಿ ಬಸ್ ಮಾಲಕರು ಇದರ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದ ಪರಿಣಾಮ ಓಡಾಟ ಸ್ಥಗಿತಗೊಂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಯು.ಟಿ.ಖಾದರ್ ಮರುದಿನವೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದು ಚರ್ಚೆ ನಡೆಸಿದ್ದರಲ್ಲದೆ ಸೂಕ್ತ ಕ್ರಮಕ್ಕೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದರು.

ಈ ರೂಟ್‌ನಲ್ಲಿ ಸಾಕಷ್ಟು ಸಂಖ್ಯೆಯ ಜನರು ಬಸ್ ಪ್ರಯಾಣವನ್ನೇ ಅವಲಂಬಿಸಿದ್ದರು. ಹಾಗಾಗಿ ಸಾರ್ವಜನಿಕರು ಸರಕಾರಿ ಬಸ್ಸಿನ ನಿರೀಕ್ಷೆಯಲ್ಲಿದ್ದರು. ಅದರಂತೆ ಸಚಿವ ಯು.ಟಿ.ಖಾದರ್ ಮುತುವರ್ಜಿ ವಹಿಸಿ ಸರಕಾರಿ ಬಸ್ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರೂ ಈ ರೂಟ್‌ನ ಕೆಲವು ಖಾಸಗಿ ಬಸ್ ಮಾಲಕರು ಬಸ್ ಓಡಾಟಕ್ಕೆ ತಡೆ ತಂದಿದ್ದರು.

ಇದೀಗ ತಿಂಗಳ ಬಳಿಕ ಈ ಎರಡೂ ರೂಟ್‌ನಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಸಾರ್ವಜನಿಕರು ಅತೀವ ಸಂತಸ ವ್ಯಕ್ತಪಡಿಸಿದ್ದಾರಲ್ಲದೆ ಸಚಿವ ಯು.ಟಿ. ಖಾದರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News