ಸಿಪಿಎಂ: ಸುನೀಲ್ ಕುಮಾರ್ ಬಜಾಲ್ ಪುನರಾಯ್ಕೆ
Update: 2017-11-21 20:09 IST
ಮಂಗಳೂರು, ನ.21: ನಗರದ ಜಪ್ಪಿನಮೊಗರಿನಲ್ಲಿ ನಡೆದ ಸಿಪಿಎಂ 22ನೆ ಮಂಗಳೂರು ನಗರ ದಕ್ಷಿಣ ಸಮ್ಮೇಳನದಲ್ಲಿ ಮುಂದಿನ 3 ವರ್ಷಗಳ ಅವಧಿಗೆ ನೂತನ ಸಮಿತಿ ಯನ್ನು ಆಯ್ಕೆಗೊಳಿಸಲಾಯಿತು.
ನೂತನ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್ ಸತತ 4ನೆ ಬಾರಿಗೆ ಪುನರಾಯ್ಕೆಗೊಂಡರು. ಸದಸ್ಯರಾಗಿ ಜಯಂತಿ ಬಿ. ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಸುರೇಶ್ ಬಜಾಲ್, ಪ್ರೇಮನಾಥ ಜಲ್ಲಿಗುಡ್ಡೆ, ಸಂತೋಷ್ ಬಜಾಲ್, ದಿನೇಶ್ ಶೆಟ್ಟಿ, ಪ್ರದೀಪ್ ಉರ್ವಸ್ಟೋರ್, ಜಯಪ್ರಕಾಶ್ ಬೊಲ್ಯ ಅವರನ್ನು ಆಯ್ಕೆ ಮಾಡಲಾಯಿತು.