ಯುಪಿಎ ಕೂಡಾ ಹೀಗೆ ಮಾಡಿತ್ತು: ಸರಕಾರದ ಸಮರ್ಥನೆ

Update: 2017-11-21 14:41 GMT

ಹೊಸದಿಲ್ಲಿ, ನ.21: ಸಂಸತ್‌ನ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯಲಿದ್ದು ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನದ ಬಗ್ಗೆ ಸರಕಾರ ವಿಳಂಬಧೋರಣೆ ತೋರುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಅವರು, ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲೂ 2008 ಮತ್ತು 2013ರಲ್ಲಿ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ನಡೆದಿದೆ. ಕಾಂಗ್ರೆಸ್ ‘ಕೆಲವು ಆಯ್ದ ವಿಷಯಗಳನ್ನು ಮರೆತುಬಿಡುವ’ ಸಮಸ್ಯೆಗೆ ಒಳಗಾಗಿದೆ ಎಂದು ಟೀಕಿಸಿದರು.

  ಸಾಮಾನ್ಯವಾಗಿ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭ ಸಂಸತ್ ಅಧಿವೇಶನ ನಿಗದಿಯಾಗುವುದಿಲ್ಲ ಎಂದ ಅನಂತಕುಮಾರ್, ಗುಜರಾತ್ ಮತ್ತು ಹಿಮಾಚಲಪ್ರದೇಶದಲ್ಲಿ ಮೂಲೋಚ್ಛಾಟನೆಯಾಗುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಹತಾಶೆಯಿಂದ ಈ ರೀತಿ ಟೀಕಿಸುತ್ತಿದೆ ಎಂದರು. ಮೋದಿ ಸರಕಾರ ಸಂಸದೀಯ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿದೆ. ಆದರೆ ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿರುವುದು ವಿರೋಧಾಭಾಸವಾಗಿದೆ ಎಂದು ಅನಂತಕುಮಾರ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News