ಮಸೀದಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ; 50 ಸಾವು

Update: 2017-11-21 14:44 GMT

ಯೋಲ (ನೈಜೀರಿಯ), ನ. 21: ಈಶಾನ್ಯ ನೈಜೀರಿಯದ ಮಸೀದಿಯೊಂದರಲ್ಲಿ ಮಂಗಳವಾರ ನಡೆದ ಆತ್ಮಾಹತ್ಯಾ ದಾಳಿಯೊಂದರಲ್ಲಿ ಕನಿಷ್ಠ 50 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದು ಈ ವರ್ಷ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

‘‘ಮುಬಿ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 50. ಆದರೆ, ದಾಳಿಯಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚು ಸಾಧ್ಯತೆಯಿದೆ’’ ಎಂದು ಅಡಮವ ರಾಜ್ಯದ ಪೊಲೀಸ್ ವಕ್ತಾರರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News