‘ಪದ್ಮಾವತಿ’ ಬಗ್ಗೆ ಸೂರಜ್ ಪಾಲ್ ಹೇಳಿಕೆಗೆ ಖಂಡನೆ
Update: 2017-11-21 20:16 IST
ಉಡುಪಿ, ನ.21: ‘ಪದ್ಮಾವತಿ’ ಚಲನಚಿತ್ರದ ನಾಯಕಿ, ಕನ್ನಡದ ಹೆಣ್ಣು ಮಗಳು ದೀಪಿಕಾ ಪಡುಕೋಣೆ ಅವರ ಶಿರಚ್ಛೇಧನಕ್ಕೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಹರಿಯಾಣ ಬಿಜೆಪಿ ಮುಖಂಡ ಸೂರಜ್ ಪಾಲ್ ಅಮು ಘೋಷಿಸಿರುವುದು ಭಾರತದ ಸಂವಿಧಾನ ನೀಡಿರುವ ಸೃಜನಶೀಲ ಸ್ವಾತಂತ್ರ್ಯದ ಮೇಲೆ ಮಾಡಿರುವ ಹಲ್ಲೆಯಾಗಿದೆ ಎಂದು ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಟೀಕಿಸಿದೆ.
ರಾಷ್ಟ್ರದ ಪ್ರಜ್ಞಾವಂತ ಜನತೆ ಬಿಜೆಪಿ ನಾಯಕರ ಈ ರೀತಿಯ ಫ್ಯಾಸಿಸ್ಟ್ ಮನೋಭಾವನೆಯನ್ನು ಖಂಡಿಸಬೇಕಾಗಿದೆ. ಸಿನಿಮಾದ ಆಕ್ಷೇಪದ ಬಗ್ಗೆ ಸಿಬಿ ಎಫ್‌ಸಿ ಮೊರೆ ಹೋಗುವುದು ಬಿಟ್ಟು ಕಲಾವಿದರಿಗೆ ಬೆದರಿಕೆ ಹಾಕುವುದು ಯಾಕೆ? ಇದೇನಾ ಬಿಜೆಪಿ ಸಂಸ್ಕೃತಿ? ಮಹಿಳೆಯರಿಗೆ ತೋರಿಸುವ ಗೌರವ ಇದೇನಾ? ಆದುದರಿಂದ ಬಿಜೆಪಿ ಮುಖಂಡನ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.