ಆರೋಗ್ಯವಂತ ಶಿಶು -ಛದ್ಮವೇಷ ಸ್ಪರ್ಧೆ
ಉಡುಪಿ, ನ.21: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯ ಬಾಲರೋಗ ವಿಭಾಗ ಮತ್ತು ಬೆಂಗಳೂರು ಹಿಮಾಲಯ ಡ್ರಗ್ ಕಂಪೆನಿಯ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ತೊಂದರೆಗಳಿಗೆ ಮನೆಮದ್ದು, ಆರೋಗ್ಯ ವಂತ ಶಿಶು ಮತ್ತು ಛದ್ಮವೇಷ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆಯನ್ನು ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮಾ ವಹಿಸಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಪ್ರಭಾಕರ ಉಪಾಧ್ಯಾಯ, ಹಿಮಾಲಯ ಡ್ರಗ್‌ನ ಪ್ರಾದೇಶಿಕ ಮ್ಯಾನೇ ಜರ್ ಮಂಜುನಾಥ ಉಪಸ್ಥಿತರಿದ್ದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಪಿ. ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ತೊಂದರೆಗಳಿಗೆ ಮನೆಮದ್ದು ಕುರಿತು ಉಪನ್ಯಾಸ ನೀಡಿದರು.
ಆರೋಗ್ಯವಂತ ಶಿಶು ಸ್ಪರ್ಧೆ ಮತ್ತು ಛದ್ಮವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಾಲರೋಗ ವಿಭಾಗದ ಸಹಪ್ರಾಧ್ಯಾ ಪಕ ಡಾ.ಚೇತನ್ ಕುಮಾರ್, ಉಪನ್ಯಾಸಕರಾದ ಡಾ.ಶರಶ್ಚಂದ್ರ ಆರ್., ಡಾ. ನಾಗರತ್ನ ಎಸ್.ಜೆ ಕಾರ್ಯಕ್ರಮದ ಸಂಯೋಜಕರಾಗಿದ್ದರು.
ಬಾಲರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಥ್ವಿರಾಜ್ ಪುರಾಣಿಕ್ ಸ್ವಾಗತಿಸಿ ದರು. ಸ್ನಾತಕ್ಕೋತ್ತರ ವಿಭಾಗದ ವಿದ್ಯಾರ್ಥಿ ಡಾ.ಶ್ರಾವ್ಯ ವಂದಿಸಿದರು. ಡಾ. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.