ಮಕ್ಕಳ ಹಬ್ಬ: ಉಡುಪಿ ಬಾಲಕಿಯರ, ಕಾರ್ಕಳ ಜೇಸಿಸಿ ಶಾಲೆಗೆ ಪ್ರಶಸ್ತಿ
ಉಡುಪಿ, ನ.21: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಳ್ಳಲಾದ 8ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿ ಗಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯುಎಫ್‌ಸಿ ಮಕ್ಕಳ ಹಬ್ಬ’ದ ಪ್ರೌಢಶಾಲಾ ವಿಭಾಗದಲ್ಲಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೀರ್ತಿ ಮತ್ತು ಬಳಗ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾರ್ಕಳ ಜೇಸಿಸಿ ಆಂಗ್ಲ ಮಾಧ್ಯಮ ಶಾಲೆಯ ಸೃಷ್ಟಿ ಮತ್ತು ಬಳಗ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿವೆ.
ಉಳಿದ ಫಲಿತಾಂಶಗಳ ವಿವರ ಈ ರೀತಿಯಲ್ಲಿದೆ. ಪ್ರೌಢಶಾಲಾ ವಿಭಾಗ: ದ್ವಿತಿಯ- ಕೆಮ್ಮಣ್ಣು ಕಾರ್ಮೆನ್ ಆಂಗ್ಲ ಮಾಧ್ಯಮ ಶಾಲೆಯ ದಿಶಾ ಮತ್ತು ಬಳಗ, ತೃತಿಯ- ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಸಂಜನಾ ಜೈನ್ ಮತ್ತು ಬಳಗ. ಪ್ರಾಥಮಿಕ ಶಾಲಾ ವಿಭಾಗ: ದ್ವಿತಿಯ- ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಧನ್ಯಾ ಮತ್ತು ಬಳಗ, ತೃತಿಯ- ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಕೃತಿ ಆರ್.ಸನಿಲ್ ಮತ್ತು ಬಳಗ. ಸ್ಪರ್ಧೆಯ ತೀರ್ಪುಗಾರರಾಗಿ ನೃತ್ಯ ತಜ್ಞರಾದ ಶ್ರುತಿ ಭಟ್, ಸಂಜನಾ ನಿತಿನ್, ಶ್ರಾವ್ಯ ಹಿರಿಯಡ್ಕ ಸಹಕರಿಸಿದ್ದರು.
ಈ ಮಕ್ಕಳ ಉತ್ಸವದಲ್ಲಿ ಒಟ್ಟು 21 ಪ್ರಾಥಮಿಕ ಶಾಲಾ ತಂಡಗಳು ಮತ್ತು 11 ಪ್ರೌಢಶಾಲಾ ತಂಡಗಳು ಭಾಗವಹಿಸಿದ್ದವು.